ದೇಶ

ದೆಹಲಿ ವಿಮಾನ ನಿಲ್ದಾಣದಲ್ಲಿ 45 ಪಿಸ್ತೂಲ್‌ಗಳನ್ನು ಹೊಂದಿದ್ದ ಭಾರತೀಯ ದಂಪತಿ ಬಂಧನ

Lingaraj Badiger

ನವದೆಹಲಿ: ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 45 ಪಿಸ್ತೂಲ್‌ಗಳನ್ನು ಹೊತ್ತಿದ್ದ ಇಬ್ಬರು ಭಾರತೀಯರನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಬಂದೂಕುಗಳು ನಿಜವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಘಟಕ ಎನ್‌ಎಸ್‌ಜಿ ಬಂದೂಕುಗಳು ಸಂಪೂರ್ಣವಾಗಿ ನೈಜವಾಗಿ ಕಾಣುತ್ತವೆ ಎಂದು ವರದಿ ಮಾಡಿದೆ. ಬಂಧಿತ ಇಬ್ಬರನ್ನು ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಎಂದು ಗುರುತಿಸಲಾಗಿದ್ದು, ಅವರು ದಂಪತಿಗಳೆಂಬುದು ತಿಳಿದುಬಂದಿದೆ.

ದಂಪತಿಗಳು ಜುಲೈ 10 ರಂದು ವಿಯೆಟ್ನಾಂನಿಂದ ಭಾರತಕ್ಕೆ ಮರಳಿದ್ದರು. ತನ್ನ ಸಹೋದರ ಮಂಜಿತ್ ಸಿಂಗ್ ನೀಡಿದ ಬ್ಯಾಗ್ ಗಳನ್ನ ಜಗಜಿತ್ ಸಿಂಗ್ ಹಿಡಿದಿದ್ದರು. ಅದರಲ್ಲಿ ಪಿಸ್ತೂಲ್‌ಗಳನ್ನು ತುಂಬಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂದೂಕುಗಳ ಒಟ್ಟು ಬೆಲೆ ಸುಮಾರು  22,50,000 ರೂ ಎಂದು ನಂಬಲಾಗಿದೆ.

ಈ ಹಿಂದೆ ಟರ್ಕಿಯಿಂದ 25 ಪಿಸ್ತೂಲ್‌ಗಳನ್ನು ಭಾರತಕ್ಕೆ ತಂದಿದ್ದಾಗಿ ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

SCROLL FOR NEXT