ದೇಶ

ರಾಷ್ಟ್ರಪತಿ ಅಭ್ಯರ್ಥಿಗಳು ಜಮ್ಮು ಮತ್ತು ಕಾಶ್ಮೀರದ 9,280 ಮತಗಳನ್ನು ಕಳೆದುಕೊಳ್ಳಲಿದ್ದಾರೆ

Lingaraj Badiger

ಶ್ರೀನಗರ: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿಗಳು ವಿಧಾನಸಭೆಯ ಅನುಪಸ್ಥಿತಿಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಯಾವುದೇ ಪ್ರತಿನಿಧಿಗಳಿಲ್ಲದ ಕಾರಣ ಜಮ್ಮು ಮತ್ತು ಕಾಶ್ಮೀರದ 9,280 ಮತಗಳನ್ನು ಕಳೆದುಕೊಳ್ಳಲಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್‌ನ ಮೂವರು ಮತ್ತು ಬಿಜೆಪಿಯ ಇಬ್ಬರು ಸೇರಿದಂತೆ ಐವರು ಲೋಕಸಭಾ ಸದಸ್ಯರು ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

ಬಿಜೆಪಿ ಸಂಸದರಿಂದ ದ್ರೌಪದಿ ಮುರ್ಮು ಅವರು 1,400 ಮತಗಳನ್ನು ಪಡೆಯುವುದು ಖಚಿತವಾಗಿದ್ದರೆ, ಯಶವಂತ್ ಸಿನ್ಹಾ ಎನ್‌ಸಿಯಿಂದ 2,100 ಮತಗಳನ್ನು ಪಡೆಯಲಿದ್ದಾರೆ. ಪ್ರತಿ ಸಂಸದರ ಮತ ಮೌಲ್ಯ 700.

ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ರಾಷ್ಟ್ರಪತಿ ಅಭ್ಯರ್ಥಿಗಳು 6,480 ಮತಗಳನ್ನು ಕಳೆದುಕೊಳ್ಳುತ್ತಾರೆ. ಏಕೆಂದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ರ ರದ್ದುಗೊಳಿಸುವವರೆಗೆ ಅಲ್ಲಿನ ವಿಧಾನಸಭೆ 90 ಸ್ಥಾನಗಳನ್ನು ಹೊಂದಿತ್ತು ಮತ್ತು ಪ್ರತಿ ಶಾಸಕರ ಮತದ ಮೌಲ್ಯ 72 ಆಗಿತ್ತು. ಅಲ್ಲದೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ನಾಲ್ವರು ಸದಸ್ಯರನ್ನು ರಾಜ್ಯಸಭೆಗೆ ಕಳುಹಿಸುತ್ತಿತ್ತು. ಅವರ ಮತದ ಮೌಲ್ಯ 2,800.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಎರಡನೇ ಬಾರಿಗೆ ರಾಷ್ಟ್ರಪತಿ ಚುನಾವಣೆಯಿಂದ ಹೊರಗುಳಿಯುತ್ತಿದೆ. ಈ 1991ರಲ್ಲಿ ಬಂಡಾಯದ ಕಾರಣ ಲೋಕಸಭೆ ಚುನಾವಣೆ ನಡೆಯದೇ 1992ರಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

SCROLL FOR NEXT