ದೇಶ

ಒಡಿಶಾ: ಅತಿಸಾರ ಭೇದಿಯಿಂದ ಆರು ಜನರು ಸಾವು, 71 ಮಂದಿ ಆಸ್ಪತ್ರೆಗೆ ದಾಖಲು; ವಿಧಾನಸಭೆಯಲ್ಲಿ ಗದ್ದಲ

Nagaraja AB

ರಾಯಗಡ:  ಒಡಿಶಾದ ರಾಯಗಡ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ  ಕಲುಷಿತ ನೀರನ್ನು ಸೇವಿಸಿದ ನಂತರ ಉಂಟಾದ ಅತಿಸಾರ ಭೇದಿಯಿಂದ ಕನಿಷ್ಠ ಆರು ಜನರು ಸಾವನ್ನಪ್ಪಿದ್ದು, 71 ಜನರು  ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. 

ಈ ಘಟನೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಪ್ರತಿಭಟನೆಗೆ ಕಾರಣವಾಯಿತು ಪ್ರತಿಪಕ್ಷ ಕಾಂಗ್ರೆಸ್ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಹೇಳಿಕೆಗೆ ಒತ್ತಾಯಿಸಿತು.

ಕಳೆದ ಮೂರು ದಿನಗಳಲ್ಲಿ ಕಾಶಿಪುರ ಬ್ಲಾಕ್‌ನ ವಿವಿಧ ಗ್ರಾಮಗಳಲ್ಲಿ ಸಾವುಗಳು ವರದಿಯಾಗಿವೆ. 11 ವೈದ್ಯರ ತಂಡ ತೊಂದರೆಗೀಡಾಗಿರುವ  ಗ್ರಾಮಗಳಿಗೆ ಭೇಟಿ ನೀಡಿ ನೀರು ಮತ್ತು ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರಕ್ಕೂ ಹೆಚ್ಚು ಗ್ರಾಮಗಳಲ್ಲಿ ಅನೇಕ ಮಂದಿ ಅತಿಸಾರದಿಂದ ಬಳಲುತ್ತಿದ್ದು,  ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಕಲುಷಿತ ನೀರು ಕುಡಿದು ಆಸ್ಪತ್ರೆಗೆ ದಾಖಲಾಗಿರುವ 71 ಜನರಲ್ಲಿ 46 ಜನರು ಟಿಕಿರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ, 14  ಜನರು ಕಾಶಿಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ್ತು 11 ಬಾಲಕಿಯರು ತತೀಬಾರ್ ಪಿಎಚ್‌ಸಿಯ ಆಶ್ರಮ ಶಾಲೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಬ್ಬ ರೋಗಿಯ ಆರೋಗ್ಯ  ಸ್ಥಿತಿ ತೀವ್ರ ಹದಗೆಟ್ಟ ನಂತರ ಕೋರಾಪುಟ್‌ನ ಎಸ್‌ಎಲ್‌ಎನ್ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. 

SCROLL FOR NEXT