ದೇಶ

ಶ್ರೀಲಂಕಾ ಅತ್ಯಂತ ಗಂಭೀರ ಬಿಕ್ಕಟ್ಟು ಎದುರಿಸುತ್ತಿದೆ, ಸಹಜವಾಗಿಯೇ ಭಾರತಕ್ಕೆ ಚಿಂತೆ: ಸರ್ವಪಕ್ಷ ಸಭೆಯಲ್ಲಿ ಜೈಶಂಕರ್

Lingaraj Badiger

ನವದೆಹಲಿ: ನೆರೆಯ ಶ್ರೀಲಂಕಾವು "ಅತ್ಯಂತ ಗಂಭೀರ ಬಿಕ್ಕಟ್ಟನ್ನು" ಎದುರಿಸುತ್ತಿದೆ. ಇದು ಸಹಜವಾಗಿಯೇ ಭಾರತವನ್ನು ಚಿಂತಿಸುವಂತೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ.

ಶ್ರೀಲಂಕಾ ಬಿಕ್ಕಟ್ಟು ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಇಂದು ಸರ್ವಪಕ್ಷಗಳ ಸಭೆ ಕರೆದಿತ್ತು. ರಾಜಕೀಯ ಪಕ್ಷಗಳ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್ ಅವರು, ಶ್ರೀಲಂಕಾದಲ್ಲಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಭಾರತ ಅದರ ಬಗ್ಗೆ ಚಿಂತಿಸುತ್ತಿದೆ. ಆದರೆ ಭಾರತವನ್ನು ಅದರೊಂದಿಗೆ ಹೋಲಿಸುವುದು ಸರಿಯಲ್ಲ. ಅಂತಹ ಪರಿಸ್ಥಿತಿ ಇಲ್ಲಿ ಉದ್ಭವಿಸುವುದಿಲ್ಲ ಎಂದರು.

"ಇದು ಅತ್ಯಂತ ನಿಕಟ ನೆರೆಹೊರೆ ದೇಶಕ್ಕೆ ಸಂಬಂಧಿಸಿದ ವಿಷಯವಾಗಿದೆ ಮತ್ತು ಹತ್ತಿರದ ಸಾಮೀಪ್ಯವನ್ನು ಹೊಂದಿದೆ. ಹೀಗಾಗಿ ನಾವು ಸ್ವಾಭಾವಿಕವಾಗಿ ಅದರ ಪರಿಣಾಮಗಳ ಬಗ್ಗೆ ಚಿಂತಿಸುತ್ತೇವೆ" ಎಂದು ಜೈಶಂಕರ್ ಹೇಳಿದರು.

ಶ್ರೀಲಂಕಾ ಮತ್ತು ಭಾರತದ ಬಗ್ಗೆ ಹೋಲಿಕೆ ಮಾಡುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶ್ರೀಲಂಕಾದ ಪರಿಸ್ಥಿತಿಯೇ ಭಾರತಕ್ಕೂ ಆಗಲಿದೆ ಎಂದು ಹೇಳುವುದನ್ನು ಕೇಳುತ್ತಿದ್ದೇವೆ. ಈ ಹೋಲಿಕೆ ಸರಿಯಲ್ಲ ಎಂದರು.

ಕಾಂಗ್ರೆಸ್ ಸಂಸದ ಪಿ ಚಿದಂಬರಂ, ವೈಎಸ್ ಆರ್ ಸಿಪಿ, ವಿಜಯಸಾಯಿ ರೆಡ್ಡಿ, ಎಐಎಡಿಎಂಕೆಯ ಎಂ ತಂಬಿದೊರೈ, ನ್ಯಾಷನಲ್ ಕಾಂಗ್ರೆಸ್ ಸಂಸದ ಫರೂಕ್ ಅಬ್ದುಲ್ಲಾ, ಡಿಎಂಕೆಯ ಟಿಆರ್ ಬಾಲು, ಎಂಡಿಎಂಕೆಯ ವೈಕೊ, ಸಿಪಿಐಯ ಬಿನೋಯ್ ವಿಶ್ವಂ ಸೇರಿದಂತೆ ವಿವಿಧ ಪಕ್ಷಗಳ ಶಾಸಕ, ಸಂಸದರು ಸಭೆಯಲ್ಲಿ ಭಾಗಿಯಾಗಿದ್ದರು.

SCROLL FOR NEXT