ದೇಶ

ದೆಹಲಿ ಸರ್ಕಾರ 50 ಕೇಂದ್ರಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಆರಂಭಿಸಲಿದೆ: ಕೇಜ್ರಿವಾಲ್

Lingaraj Badiger

ನವದೆಹಲಿ: ದೆಹಲಿ ಸರ್ಕಾರ ನಗರದಾದ್ಯಂತ 50 ಕೇಂದ್ರಗಳಲ್ಲಿ "ಸ್ಪೋಕನ್ ಇಂಗ್ಲಿಷ್ ಕೋರ್ಸ್" ಅನ್ನು ಪ್ರಾರಂಭಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶನಿವಾರ ಘೋಷಿಸಿದ್ದಾರೆ.

ಆನ್‌ಲೈನ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, 12 ನೇ ತರಗತಿ ಪೂರ್ಣಗೊಳಿಸಿದ ಮತ್ತು 18 ರಿಂದ 35 ವರ್ಷದೊಳಗಿನ ಯಾವುದೇ ವ್ಯಕ್ತಿ ಸ್ಪೋಕನ್ ಇಂಗ್ಲಿಷ್ ಕೋರ್ಸ್ ಸೇರಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ತರಬೇತಿ ನೀಡುವ ಮೂಲಕ ಇಂಗ್ಲಿಷ್ ಸಂವಹನ ಕೌಶಲ್ಯವನ್ನು ಸುಧಾರಿಸುವ ಈ ಕಾರ್ಯಕ್ರಮದಲ್ಲಿ ಮೊದಲ ಹಂತದಲ್ಲಿ 1 ಲಕ್ಷ ಮಕ್ಕಳಿಗೆ ಪ್ರವೇಶ ನೀಡಲಾಗುವುದು ದೆಹಲಿ ಸಿಎಂ ಹೇಳಿದ್ದಾರೆ.

"ಸ್ಪೋಕನ್ ಇಂಗ್ಲಿಷ್ ಪ್ರೋಗ್ರಾಂನ ಮೊದಲ ಹಂತದ ಈ ಕೋರ್ಸ್ ಅನ್ನು 50 ಕೇಂದ್ರಗಳಲ್ಲಿ ಪ್ರಾರಂಭಿಸುತ್ತೇವೆ. ಅಲ್ಲಿ 1 ಲಕ್ಷ ಜನ ಪ್ರವೇಶ ಪಡೆಯಲಿದ್ದಾರೆ. 18 ರಿಂದ 35 ವರ್ಷ ವಯಸ್ಸಿನ 12ನೇ ತರಗತಿ ತೇರ್ಗಡೆಯಾದ ಯಾವುದೇ ಯುವಕರು ಈ ಕಾರ್ಯಕ್ರಮದ ಭಾಗವಾಗಬಹುದು. ಈ ಕೋರ್ಸ್ ಉದ್ಯೋಗ ಪಡೆಯಲು ಮತ್ತು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯ ಮಾಡಲಿದೆ" ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಈ ಸ್ಪೋಕನ್ ಇಂಗ್ಲಿಷ್ ಕೋರ್ಸ್‌ ಸೇರಿಕೊಳ್ಳಲು ಯಾವುದೇ ಶುಲ್ಕ ಇರುವುದಿಲ್ಲ. ಆದರೆ ಆರಂಭದಲ್ಲಿ ಭದ್ರತಾ ಠೇವಣಿಯಾಗಿ 950 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ ಮತ್ತು ಆ ಹಣವನ್ನು ಕೋರ್ಸ್ ಮುಗಿದ ನಂತರ ವಾಪಸ್ ನೀಡಲಾಗುವುದು. ಇದು 3-4 ತಿಂಗಳ ಕೋರ್ಸ್ ಆಗಿದ್ದು, ಕೆಲಸ ಮಾಡುವ ಯುವಕರು ಸಹ ವಾರಾಂತ್ಯ ಮತ್ತು ಸಂಜೆ ತರಗತಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ" ಎಂದು ಕೇಜ್ರಿವಾಲ್ ವಿವರಿಸಿದ್ದಾರೆ.

ಕೋರ್ಸ್‌ಗೆ ಯಾವುದೇ ಶುಲ್ಕವಿರುವುದಿಲ್ಲ ಆದರೆ ಆರಂಭದಲ್ಲಿ ಜನರು 950 ರೂಪಾಯಿಗಳನ್ನು ಭದ್ರತಾ ಹಣವಾಗಿ ಠೇವಣಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

SCROLL FOR NEXT