ಡಿಜಿಟಲ್ ಜ್ಯೋತಿ 
ದೇಶ

ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸಲು ಜನತೆಗೆ ಪ್ರಧಾನಿ ಮೋದಿ ಕರೆ

ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಜು.23 ರಂದು ಕರೆ ನೀಡಿದ್ದಾರೆ. 

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರಿಗೆ ಡಿಜಿಟಲ್ ಗೌರವ ಸಲ್ಲಿಸುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಜು.23 ರಂದು ಕರೆ ನೀಡಿದ್ದಾರೆ. 
 
ನವದೆಹಲಿಯ ಸೆಂಟ್ರಲ್ ಪಾರ್ಕ್ ನಲ್ಲಿ ಅಳವಡಿಸಲಾಗಿರುವ ಡಿಜಿಟಲ್ ಜ್ಯೋತ್ ಹೆಚ್ಚು ಪ್ರಜ್ವಲಿಸಲು, ಆನ್ ಲೈನ್ ಮೂಲಕ ಸಲ್ಲಿಸುವ ಪ್ರತಿಯೊಂದು ಗೌರವವೂ ಮುಖ್ಯವಾಗಲಿದೆ.
 
ಸೆಂಟ್ರಲ್ ಪಾರ್ಕ್ ದೆಹಲಿಯಲ್ಲಿ ಸ್ಕೈ ಬೀಮ್ ದೀಪವನ್ನು ಅಳವಡಿಸಲಾಗಿದ್ದು, ಪ್ರತಿ ಬಾರಿ ವ್ಯಕ್ತಿಗಳು ಆನ್ ಲೈನ್ ಮೂಲಕ ಗೌರವ ಸಲ್ಲಿಸಿದಾಗಲೂ ಈ ಡಿಜಿಟಲ್ ಜ್ಯೋತ್ ನ ಪ್ರಕಾಶ ಹೆಚ್ಚಾಗಲಿದೆ. ಆದ ಕಾರಣ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಸ್ವಾತಂತ್ರ್ಯೊತ್ಸವದ ಅಮೃತ ಮಹೋತ್ಸವವನ್ನು ಬಲಪಡಿಸಿ ಎಂದು ಪ್ರಧಾನಿ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.
 
ಡಿಜಿಟಲ್ ಜ್ಯೋತಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿರೋಗಳನ್ನು ನೆನಪಿನಲ್ಲಿಡಲು ಸಲ್ಲಿಸಲಾಗುತ್ತಿರುವ ವಿಶೇಷವಾದ ಗೌರವವಾಗಿದೆ. digitaltribute.in ಮೂಲಕ ಜನತೆ ಇದರಲ್ಲಿ ಭಾಗವಹಿಸಬಹುದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್