ದೇಶ

ಈ ಬಾರಿಯ ಬಂಡಾಯ ಶಿವಸೇನೆಯನ್ನು ಮುಗಿಸುವ ಉದ್ದೇಶ ಹೊಂದಿತ್ತು: ಶಿಂಧೆ ಬಣದ ವಿರುದ್ಧ ಠಾಕ್ರೆ ವಾಗ್ದಾಳಿ 

Srinivas Rao BV

ಮುಂಬೈ: ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಲಿ ಸಿಎಂ ಏಕನಾಥ್ ಶಿಂಧೆ ಬಣದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಹಿಂದಿನ ಬಾರಿಯ ಬಂಡಾಯಕ್ಕಿಂತ ಭಿನ್ನವಾಗಿದ್ದ ಈ ಬಾರಿಯ ಬಂಡಾಯ ಶಿವಸೇನೆ ಪಕ್ಷವನ್ನೇ ಮುಗಿಸುವ ಉದ್ದೇಶ ಹೊಂದಿತ್ತು ಎಂದು ಹೇಳಿದ್ದಾರೆ. 

ಶಿವಸೇನೆ ಹಿಂದುತ್ವಕ್ಕಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಆದರೆ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಹಿಂದುತ್ವವನ್ನು ಬಳಸಿಕೊಳ್ಳುತ್ತದೆ ಎಂದು ಉದ್ಧವ್ ಠಾಕ್ರೆ ದಕ್ಷಿಣ ಮುಂಬೈ ನಲ್ಲಿ ವಾರ್ಡ್ ಮಟ್ಟದ ಪಕ್ಷದ ಕಚೇರಿಯ ಉದ್ಘಾಟನಾ ಭಾಷಣದ ವೇಳೆ ಹೇಳಿದ್ದಾರೆ.

ಕಳೆದ ತಿಂಗಳು 39 ಶಾಸಕರೊಂದಿಗೆ ಬಂಡಾಯವೆದ್ದಿದ್ದ ಏಕನಾಥ್ ಶಿಂಧೆ, ಶಿವಸೇನೆ ನೇತೃತ್ವದ ಎಂವಿಎ ಸರ್ಕಾರ ಪತನಗೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸಿಎಂ ಆಗಿದ್ದರು. ಈ ಬಗ್ಗೆ ಮಾತನಾಡಿರುವ "ಈ ಬಾರಿಯ ಬಂಡಾಯ ಶಿವಸೇನೆಯನ್ನು ಶಾಶ್ವತವಾಗಿ ಮುಗಿಸುವ ಸಂಚು ಹೊಂದಿತ್ತು. ನಮ್ಮನ್ನು ಎದುರಿಸುವುದಕ್ಕಾಗಿ ವೃತ್ತಿಪರ ಏಜೆನ್ಸಿಗಳನ್ನು ಬಂಡಾಯ ಶಾಸಕರು ಸಂಪರ್ಕಿಸಿದ್ದರು. ಇದು ಹಣ ಹಾಗೂ ನಿಷ್ಠೆಯ ನಡುವಿನ ಸಮರ ಎಂದು ಠಾಕ್ರೆ ಹೇಳಿದ್ದಾರೆ.

SCROLL FOR NEXT