ದೇಶ

ರಕ್ಷಣಾ ಉಪಕರಣ, ಶಸ್ತ್ರಾಸ್ತ್ರ ಖರೀದಿ: 28,732 ಕೋಟಿ ರೂಪಾಯಿ ಪ್ರಸ್ತಾವನೆಗೆ ಸಮಿತಿ ಅನುಮೋದನೆ

Srinivas Rao BV

ನವದೆಹಲಿ: ರಕ್ಷಣಾ ಉಪಕರಣಗಳ ಖರೀದಿ ಪರಿಷತ್ ರಕ್ಷಣಾ ಉಪಕರಣಗಳು, ಶಸ್ತ್ರಾಸ್ತ್ರಗಳ ಖರೀದಿಗೆ 28,732 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

ಗುಂಡು ನಿರೋಧಕ ಜಾಕೆಟ್ ಗಳು, ಸ್ವಾರ್ಮ್ ಡ್ರೋನ್ (ಸಮೂಹ ಡ್ರೋನ್) ಗಳು, ದೇಶೀಯ ವಿನ್ಯಾಸ, ಅಭಿವೃದ್ಧಿ, ಹಾಗೂ ಉತ್ಪಾದನೆ ಯೋಜನೆಯಡಿಯಲ್ಲಿ ಕಾರ್ಬೈನ್ಸ್ ಗಳ ಖರೀದಿಗೆ ಅನುಮೋದನೆ ದೊರೆತಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಈ ರಕ್ಷಣಾ ಸಮಿತಿ ಸಭೆ ನಡೆದಿದ್ದು,  ಈ ಅನುಮೋದನೆ ರಕ್ಷಣಾ ಕ್ಷೇತ್ರಕ್ಕೆ ಉತ್ತೇಜನ ನೀಡಿದ್ದು, ದೇಶೀಯ ಸಣ್ಣ ಶಸ್ತ್ರಾಸ್ತ್ರ ತಯಾರಿಕಾ ಉದ್ಯಮಕ್ಕೂ ಉತ್ತೇಜನ ದೊರೆಯಲಿದೆ.

ಲಡಾಖ್ ನ ಎಲ್ಎಸಿಯಲ್ಲಿ ಚೀನಾದೊಂದಿಗೆ ಸಂಘರ್ಷ ಉಂಟಾದ ಸಂದರ್ಭದಲ್ಲೇ ಹೊಸ ರಕ್ಷಣಾ ಶಸ್ತ್ರಾಸ್ತ್ರಗಳ ಖರೀದಿಗೆ ಅನುಮೋದನೆ ದೊರೆತಿರುವುದು ಮಹತ್ವ ಪಡೆದುಕೊಂಡಿದೆ.

ಸೇನಾ ಪಡೆಗಳ ಭದ್ರತೆ ಹಾಗೂ ಭಯೋತ್ಪಾದನೆ ಕಾರ್ಯಾಚರಣೆಯ ವೇಳೆ ಸುರಕ್ಷತೆಯನ್ನು ಒದಗಿಸಲು ಖರೀದಿ ಪಟ್ಟಿಯಲ್ಲಿ ಭಾರತೀಯ ಗುಣಮಟ್ಟ ಬಿಐಎಸ್ VI ನ ಬುಲೆಟ್ ಪ್ರೂಫ್ ಜಾಕೆಟ್ ಗಳ ಖರೀದಿಯನ್ನೂ ಪಟ್ಟಿ ಮಾಡಲಾಗಿತ್ತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

SCROLL FOR NEXT