ದೇಶ

ಮಧ್ಯ ಪ್ರದೇಶ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಪತ್ತೆ

Lingaraj Badiger

ಖಾಂಡ್ವಾ: ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯ ಖಾಂಡ್ವಾದ ಜವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಟ್ಖೇಡಿ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೂವರು ಸಹೋದರಿಯರ ಶವ ಬುಧವಾರ ಪತ್ತೆಯಾಗಿದೆ.

ಮೃತರನ್ನು ಸೋನು, ಸಾವಿತ್ರಿ, ಲಲಿತಾ ಎಂದು ತಿಳಿದು ಬಂದಿದ್ದು, ಈ ಮೂವರು ತಾಯಿ ಮತ್ತು ಸಹೋದರರ ಜೊತೆ ವಾಸಿಸುತ್ತಿದ್ದರು. ಅವರು ತಾಯಿ, ಇಬ್ಬರು ಸಹೋದರಿಯರು ಮತ್ತು ಮೂವರು ಸಹೋದರರನ್ನು ಅಗಲಿದ್ದಾರೆ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗದ ಕಾರಣ ಸಾವಿನ ಹಿಂದಿನ ಪ್ರಮುಖ ಕಾರಣ ಇನ್ನೂ ತಿಳಿದು ಬಂದಿಲ್ಲ.

ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

SCROLL FOR NEXT