ದೇಶ

ತೆಲಂಗಾಣ: ಕ್ರೇನ್ ತಂತಿ ತುಂಡಾಗಿ ಐವರು ಕಾರ್ಮಿಕರ ಸಾವು, ಇಬ್ಬರಿಗೆ ಗಾಯ

Lingaraj Badiger

ನಾಗರ್‌ಕರ್ನೂಲ್: ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಏತ ನೀರಾವರಿ ಯೋಜನೆ ನಡೆಯುತ್ತಿದ್ದ ವೇಳೆ ಕ್ರೇನ್ ತಂತಿ ತುಂಡಾಗಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

ಪಾಲಮುರು ರಂಗಾರೆಡ್ಡಿ ಏತ ನೀರಾವರಿ ಯೋಜನೆಯ ಪ್ಯಾಕೇಜ್ 1ರಲ್ಲಿ ಕೆಲಸ ಮಾಡುತ್ತಿದ್ದ ಕೊಲ್ಲಾಪುರ ಬ್ಲಾಕ್‌ನ ಯಳ್ಳೂರು ಗ್ರಾಮದಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಮೃತ ಐವರು ಕಾರ್ಮಿಕರನ್ನು ಪೂರ್ವ ಗೋದಾವರಿ ಜಿಲ್ಲೆಯ ಸಿನು(35), ಜಾರ್ಖಂಡ್ ನ ಭೋಲಾನಾಥ್(40), ಪ್ರವೀಣ್, ಕಮಲೇಶ್ ಮತ್ತು ಸೋನು ಕುಮಾರ್ ಎಂದು ಗುರುತಿಸಲಾಗಿದೆ ಎಂದು ಕೊಲ್ಲಾಪುರ ಪೊಲೀಸ್ ಇನ್ಸ್‌ಪೆಕ್ಟರ್ ಯಾಲಾದ್ರಿ ತಿಳಿಸಿದ್ದಾರೆ.

100 ಅಡಿ ಆಳದ ಸುರಂಗದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಏಳು ಕಾರ್ಮಿಕರು ಕೆಲಸ ಮುಗಿಸಿ ಹೊರಗೆ ಬರುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ. 70 ಅಡಿ ಮೇಲಕ್ಕೆ ಬರುತ್ತಿದ್ದಂತೆ, ಕ್ರೇನ್‌ನ ಕೇಬಲ್ ತುಂಡಾಯಿತು. ಆಗ ಮತ್ತೆ ಆಳವಾದ ಸುರಂಗಕ್ಕೆ ಬಿದ್ದಿದ್ದಾರೆ ಎಂದು ಎಂದು ಯಾಲಾದ್ರಿ ಹೇಳಿದರು.

ಇವರಲ್ಲಿ ಐವರು ಗಂಭೀರವಾಗಿ ಗಾಯಗೊಂಡರೆ, ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಧಿಕಾರಿಗಳು ತಕ್ಷಣ ಮತ್ತೊಂದು ಕ್ರೇನ್ ಸಹಾಯದಿಂದ ಅವರನ್ನು ಹೊರಕ್ಕೆತ್ತಿ ಶುಕ್ರವಾರ ನಸುಕಿನಲ್ಲಿ ಹೈದರಾಬಾದ್‌ನ ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

SCROLL FOR NEXT