ದೇಶ

ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಗೆ ಜಾಮೀನು ನಿರಾಕರಿಸಿದ ಗುಜರಾತ್ ಕೋರ್ಟ್ 

Srinivas Rao BV

ಅಹ್ಮದಾಬಾದ್: ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಹಾಗೂ ಮಾಜಿ ಪೊಲೀಸ್ ಮಹಾನಿರ್ದೇಶಕ ಶ್ರೀಕುಮಾರ್ ಗೆ ಅಹ್ಮದಾಬಾದ್ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ. 

2022 ರ ದಂಗೆ ಪ್ರಕರಣಗಳಲ್ಲಿ ಮುಗ್ಧರನ್ನು ಸಿಲುಕಿಸಲು ದಾಖಲೆಗಳನ್ನು "ಸೃಷ್ಟಿಸಿ"ದ ಆರೋಪದಡಿ ತೀಸ್ತಾ ಸೆಟಲ್ವಾಡ್ ಹಾಗೂ ಶ್ರೀಕುಮಾರ್ ಬಂಧನಕ್ಕೊಳಗಾಗಿದ್ದಾರೆ. 

ಎರಡೂ ಆದೇಶಗಳನ್ನು ತಿರಸ್ಕರಿಸಲಾಗಿದೆ ಎಂದು ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಡಿ ಡಿ ಥಾಕ್ಕರ್ ಹೇಳಿದ್ದಾರೆ. ತೀಸ್ತಾ ಸೆಟಲ್ವಾಡ್ ಹಾಗೂ ಶ್ರೀಕುಮಾರ್ ಅವರನ್ನು ಅಹ್ಮದಾಬಾದ್ ಕ್ರೈಮ್ ಬ್ರಾಂಚ್ ಪೊಲೀಸರು ತಿಂಗಳ ಹಿಂದೆ ಬಂಧಿಸಿದ್ದರು. 

ಗುಜರಾತ್ ನಲ್ಲಿ ಅಂದು ನರೇಂದ್ರ ಮೋದಿ ನೇತೃತ್ವದ  ಸರ್ಕಾರವನ್ನು ಅಸ್ಥಿರಗೊಳಿಸುವುದು ಅಥವ ಉರುಳಿಸುವ ಅರ್ಜಿದಾರರಾದ (ಸೆಟಲ್ವಾಡ್) ನ ರಾಜಕೀಯ ಉದ್ದೇಶವಾಗಿತ್ತು. ಇದಕ್ಕಾಗಿ ಆಕೆ ಎದುರಾಳಿ ರಾಜಕೀಯ ಪಕ್ಷದಿಂದ ಅಕ್ರಮವಾಗಿ ಆರ್ಥಿಕ ಹಾಗೂ ಇನ್ನಿತರ ಪ್ರಯೋಜನ, ಪ್ರತಿಫಲಗಳನ್ನು ಅವರು ಪಡೆದಿದ್ದರು ಎಂದು ಎಸ್ಐಟಿ ಪ್ರಮಾಣಪತ್ರದಲ್ಲಿ ಹೇಳಿದೆ.

ಸಾಕ್ಷಿಗಳ ಹೇಳಿಕೆಗಳನ್ನು ಉಲ್ಲೇಖಿಸಿರುವ ಎಸ್ಐಟಿ, ದಿವಂಗತ ನಾಯಕ ಅಹ್ಮದ್ ಪಟೇಲ್ ಅವರ ಆಣತಿಯಂತೆ ಈ ಕೆಲಸಗಳು ನಡೆದಿತ್ತು, ಅವರ ಆಣತಿಯ ಮೇರೆಗೇ ಸೆಟಲ್ವಾಡ್ ಗೆ 30 ಲಕ್ಷ ರೂಪಾಯಿ ಸಂದಾಯವಾಗಿತ್ತು ಎಂದು ಎಸ್ಐಟಿ ಹೇಳಿತ್ತು.

SCROLL FOR NEXT