ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಎಸ್ಎಸ್ ಸಿ ಹಗರಣ: ಬಂಧಿತ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಇಡಿ ಮುಂದು!

ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿರ ಕನಿಷ್ಠ ಮೂರು ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ(ಇಡಿ) ಪ್ರಾರಂಭಿಸಿದೆ.

ಸಂಗ್ರಹ ಚಿತ್ರ
Vishwanath S
Updated On : 30 Jul 2022, 4:32 pm

ಕೋಲ್ಕತ್ತಾ: ಅಮಾನತುಗೊಂಡಿರುವ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿರ ಕನಿಷ್ಠ ಮೂರು ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ(ಇಡಿ) ಪ್ರಾರಂಭಿಸಿದೆ. 

ಇನ್ನು ಆ ಖಾತೆಗಳಲ್ಲಿ ಕನಿಷ್ಠ ಎರಡು ಕೋಟಿ ರೂ. ಪತ್ತೆಯಾಗಿದೆ ಎಂದು ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಶನಿವಾರ ಈ ಮಾಹಿತಿ ನೀಡಿದ್ದಾರೆ.

ಮುಖರ್ಜಿಯವರ ಹಲವಾರು 'ನಕಲಿ ಕಂಪನಿಗಳ' ಬ್ಯಾಂಕ್ ಖಾತೆಗಳು ಇಡಿ ಸ್ಕ್ಯಾನರ್ ಅಡಿಯಲ್ಲಿವೆ ಎಂದು ಅವರು ಹೇಳಿದರು. ಮುಖರ್ಜಿಯವರ ಮೂರು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ ಆರಂಭವಾಗಿದೆ. ಈ ಖಾತೆಗಳಲ್ಲಿ ಒಟ್ಟು ಸುಮಾರು ಎರಡು ಕೋಟಿ ರೂ. ಇದ್ದು ಈ ಖಾತೆಗಳನ್ನು ಬಹು ವಹಿವಾಟು ನಡೆಸಲು ಬಳಸಲಾಗಿದೆ ಎಂದು ನಾವು ಶಂಕಿಸಿದ್ದು ಜೊತೆಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು. 

Advertisement

Advertisement

ಇದನ್ನೂ ಓದಿ: ನಾನು ಪಿತೂರಿಯ ಬಲಿಪಶು, ಸಮಯವೇ ಎಲ್ಲದಕ್ಕೂ ಉತ್ತರಿಸಲಿದೆ: ಬಂಧಿತ ಪಾರ್ಥ ಚಟರ್ಜಿ

ಖಾತೆಯಿಂದ ಪಡೆದ ಹಣದ ಮೊತ್ತವನ್ನು ಬಹಿರಂಗಪಡಿಸದ ಅಧಿಕಾರಿಯೂ, 'ನಕಲಿ ಕಂಪನಿಗಳ' ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

'ನಾವು ಸಂಬಂಧಪಟ್ಟ ಅಧಿಕಾರಿಗಳಿಂದ ಈ ಬ್ಯಾಂಕ್ ಖಾತೆಗಳ ವಿವರಗಳನ್ನು ಕೇಳಿದ್ದೇವೆ. ಖಾತೆಗಳನ್ನು ಪರಿಶೀಲಿಸಿದ ನಂತರ, ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. 

ಮುಖರ್ಜಿ ಅವರು ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಅವರ ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ಇಡಿ ಹೇಳಿದೆ.

ಇದನ್ನೂ ಓದಿ: 50 ಕೋಟಿ ರೂ. ನಗದು, ಅರ್ಧ ಕೆಜಿಯ 6 ಬಳೆ, ವಿದೇಶಿ ಕರೆನ್ಸಿ! 'ಕ್ಯಾಶ್ ಕ್ವೀನ್' ಅರ್ಪಿತಾ ಮನೆಯಲ್ಲಿ ಸಿಕ್ಕಿದ್ದು ಏನೇನು?

ಮೂಲಗಳ ಪ್ರಕಾರ, ಚಟರ್ಜಿ ಅವರ ಬ್ಯಾಂಕ್ ಖಾತೆಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬೆಳಗ್ಗೆಯಿಂದ ಮುಖರ್ಜಿ ಮತ್ತು ಚಟರ್ಜಿ ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರ ಎರಡು ಫ್ಲಾಟ್‌ಗಳಿಂದ 50 ಕೋಟಿ ರೂಪಾಯಿ ಮೌಲ್ಯದ ನಗದು ಜೊತೆಗೆ ಅಪಾರ ಪ್ರಮಾಣದ ಚಿನ್ನಾಭರಣ ಮತ್ತು ವಿದೇಶಿ ಕರೆನ್ಸಿಯನ್ನು ಇಡಿ ವಶಪಡಿಸಿಕೊಂಡಿದೆ. ಇಬ್ಬರೂ ಆಗಸ್ಟ್ 3ರವರೆಗೆ ಕೇಂದ್ರ ಸಂಸ್ಥೆಯ ವಶದಲ್ಲಿರಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement