ದೇಶ

ತನಿಖಾ ಸಂಸ್ಥೆಗಳಿಂದ ಒತ್ತಡ: ಹೊಸ ಅಬಕಾರಿ ನೀತಿ ಹಿಂಪಡೆದ ಕೇಜ್ರಿವಾಲ್ ಸರ್ಕಾರ!

Srinivas Rao BV

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ತನ್ನ ಹೊಸ ಅಬಕಾರಿ ನೀತಿಯನ್ನು ಹಿಂಪಡೆದಿದೆ.
 
ಈ ನೀತಿಯಲ್ಲಿ ಮದ್ಯ ಪರವಾನಗಿದಾರರಿಗೆ ಅನಗತ್ಯ ಹಣಕಾಸಿನ ಅನುಕೂಲಗಳು" ಮತ್ತು ಇತರ "ಕಾನೂನುಬದ್ಧ ನಿಬಂಧನೆಗಳನ್ನು ಉಲ್ಲಂಘಿಸುವ ಪ್ರಮುಖ ನಿರ್ಧಾರಗಳು/ ಕ್ರಮಗಳು ಹಾಗೂ  ದೊಡ್ಡ ಆರ್ಥಿಕ ಪರಿಣಾಮಗಳ ಆರೋಪ ಕೇಳಿಬಂದಿದ್ದರಿಂದ ಸಿಬಿಐ, ದೆಹಲಿ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ವಿಭಾಗದಿಂದ ಹಲವು ತನಿಖೆಗಳು ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಅಬಕಾರಿ ನೀತಿಯನ್ನು ದೆಹಲಿ ಸರ್ಕಾರ ಹಿಂಪಡೆದಿದೆ.

ಹೂಸ ಅಬಕಾರಿಯನ್ನು ಹಿಂಪಡೆಯುತ್ತಿದ್ದೇವೆ ಹಾಗೂ ಸರ್ಕಾರಿ ಮದ್ಯದ ಅಂಗಡಿಗಳನ್ನು ತೆರೆಯಲು ನಿರ್ದೇಶನ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ. ಸಿಬಿಐ, ಇಡಿ ಮೂಲಕ ಮದ್ಯದ ಪರವಾನಗಿದಾರರಿಗೆ, ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಬಿಜೆಪಿ ಬೆದರಿಕೆ ಹಾಕುತ್ತಿತ್ತು, ಆದ ಕಾರಣ ಹೊಸ ನೀತಿ ವಿಫಲವಾಗಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. 

ದೆಹಲಿಯ ಅಂಗಡಿ ಮಾಲೀಕರು, ಅಧಿಕಾರಿಗಳಿಗೆ ಬೆದರಿಕೆ ಹಾಕುವ ಮೂಲಕ ಬಿಜೆಪಿ ಗುಜರಾತ್ ಮಾದರಿಯಲ್ಲಿ ನಕಲಿ, ಕರ್ತವ್ಯರಹಿತ ಮದ್ಯದ ಮಾರಾಟವನ್ನು ಉತ್ತೇಜಿಸಲು ಯತ್ನಿಸುತ್ತಿತ್ತು ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮೊದಲು ವರದಿ ಪ್ರಕಟಿಸಿತ್ತು. ಹಳೆಯ ಮದ್ಯ ನೀತಿ ಆ.1, 2022 ರಿಂದ ಮರಳಿ ಜಾರಿಗೆ ಬರಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡುವಂತ ಹದೆಹಲಿಯಲ್ಲಿ ಮದ್ಯದ ಸಗಟು ವ್ಯಾಪಾರಿಗಳಿಗೆ ಅಕ್ರಮ ಲಾಭ ಮತ್ತು ಅನುಕೂಲಗಳನ್ನು ಈ ಸರ್ಕಾರದ ನೀತಿ ವಿಸ್ತರಿಸುತ್ತಿದೆ ಎಂಬುದನ್ನು ತನ್ನ ವರದಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಬಹಿರಂಗಗೊಳಿಸಿತ್ತು. 

SCROLL FOR NEXT