ದೇಶ

ಭಾರಿ ಪ್ರಮಾಣದ ಹಣದೊಂದಿಗೆ ಸಿಕ್ಕಿಬಿದ್ದಿದ್ದ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ನಾಯಕರ ಅಮಾನತು

Ramyashree GN

ನವದೆಹಲಿ: ಶನಿವಾರ ಪಶ್ಚಿಮ ಬಂಗಾಳದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಮ್ಮ ವಾಹನದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಬಳಿಕ ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಭಾನುವಾರ ಪಕ್ಷದಿಂದ ಅಮಾನತುಗೊಳಿಸಲಾಗಿದೆ.

'ಮುಂದಿನ ದಿನಗಳಲ್ಲಿ ಯಾವುದೇ ಸಾರ್ವಜನಿಕ ಪ್ರತಿನಿಧಿಯಾಗಲಿ, ಪಕ್ಷದ ಪದಾಧಿಕಾರಿಯಾಗಲಿ, ಕಾರ್ಯಕರ್ತರಾಗಲಿ ಎಲ್ಲರ ಮಾಹಿತಿಯನ್ನು ನಮ್ಮ ಬಳಿ ಇಟ್ಟುಕೊಂಡಿದ್ದೇವೆ. ಈ ಸಂಬಂಧ ಯಾರೇ ಶಾಮೀಲಾಗಿದ್ದರೂ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಜಾರ್ಖಂಡ್ ಕಾಂಗ್ರೆಸ್‌ನ ಕಾರ್ಯದರ್ಶಿ ಮತ್ತು ಉಸ್ತುವಾರಿ ಅವಿನಾಶ್ ಪಾಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ತಮ್ಮದಲ್ಲದ ಇತರ ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವುದು ಮತ್ತು ಅಸ್ಥಿರಗೊಳಿಸುವುದು ಬಿಜೆಪಿಯ ಸ್ವಭಾವವಾಗಿದೆ. ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರ ಸರ್ಕಾರದ ವಿರುದ್ಧವೂ ಅದೇ ರೀತಿ ಮಾಡಲಾಗಿದೆ. ಶಾಸಕರಿಗೆ ಹಣ ನೀಡಿರುವ ಏಕೈಕ ಕಾರಣವೇ,  ಸರ್ಕಾರ ಬೀಳುವಂತೆ ಮಾಡುವುದು' ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬಂಧು ಟಿರ್ಕಿ ಈ ಹಿಂದೆ ಆರೋಪಿಸಿದ್ದರು.

ಮೂವರು ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರು ಎಸ್‌ಯುವಿಯಲ್ಲಿ ರಾಣಿಹತಿ ಸಮೀಪದ ರಾಷ್ಟ್ರೀಯ ಹೆದ್ದಾರಿ-16 ರಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರು ಅವರ ವಾಹನವನ್ನು ತಡೆದರು. ಈ ವೇಳೆ ವಾಹನದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿತ್ತು. ಬಳಿಕ ಮೂವರನ್ನು ವಶಕ್ಕೆ ಪಡೆದಿದ್ದರು.

ಅನ್ಸಾರಿ ಜಮ್ತಾರಾ ಶಾಸಕರಾಗಿದ್ದರೆ, ಕಚ್ಚಪ್ ರಾಂಚಿ ಜಿಲ್ಲೆಯ ಖಿಜ್ರಿ ಶಾಸಕರಾಗಿದ್ದರೆ ಮತ್ತು ಕೊಂಗಾರಿ ಸಿಮ್ಡೆಗಾ ಜಿಲ್ಲೆಯ ಕೊಲೆಬಿರಾ ಕ್ಷೇತ್ರದ ಶಾಸಕರಾಗಿದ್ದಾರೆ.

SCROLL FOR NEXT