ದೇಶ

ನಿಜವಾದ 'ಶಿವಸೇನಾ' ಯಾವುದೆಂಬುದು ಚುನಾವಣಾ ಆಯೋಗವೇ ನಿರ್ಧರಿಸಲಿ: 'ಸುಪ್ರೀಂ'ನಲ್ಲಿ ಶಿಂಧೆ ಟೀಂ ಒತ್ತಾಯ

Vishwanath S

ನವದೆಹಲಿ: ಉದ್ಧವ್ ಠಾಕ್ರೆ ಅವರ ತಂಡದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಬೇಕು ಮತ್ತು ನಿಜವಾದ ಶಿವಸೇನೆ ಯಾರ ಬಣ ಎಂಬುದನ್ನು ಚುನಾವಣಾ ಆಯೋಗ ನಿರ್ಧರಿಸಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಇಂದು ಸುಪ್ರೀಂಕೋರ್ಟ್‌ ಅನ್ನು ಒತ್ತಾಯಿಸಿದ್ದಾರೆ. 

ತಮ್ಮ ಬಳಿಯಿರುವ ಬಹುಮತದ ಅಂಕಿಅಂಶ ಪ್ರಸ್ತಾಪಿಸುತ್ತಾ ಬಹುಮತದಿಂದ ಪ್ರಜಾಸತ್ತಾತ್ಮಕವಾಗಿ ತೆಗೆದುಕೊಂಡ ಪಕ್ಷದ ಆಂತರಿಕ ನಿರ್ಧಾರಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಬಾರದು ಎಂದು ಸಹ ಶಿಂಧೆ ಬಣ ಕೋರ್ಟ್ ಗೆ ಹೇಳಿದೆ.

ಉದ್ಧವ್ ಠಾಕ್ರೆ ತಂಡವು ಚುನಾವಣಾ ಆಯೋಗವು ಪಕ್ಷದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದನ್ನು ಬಯಸುತ್ತಿಲ್ಲ. ಶಿಂಧೆ ನೇತೃತ್ವದ ಬಂಡಾಯ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿದ ಅರ್ಜಿಗಳ ತೀರ್ಪು ಬರುವವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಚುನಾವಣಾ ಆಯೋಗವನ್ನು ತಡೆಯುವಂತೆ ಕಳೆದ ಸೋಮವಾರ ನ್ಯಾಯಾಲಯವನ್ನು ಕೋರಿದೆ. 

ನಿಜವಾದ ಸೇನಾ ಯಾರು ಎಂಬ ಪ್ರಶ್ನೆ ಈಗಾಗಲೇ ಚುನಾವಣಾ ಆಯೋಗದ ಮುಂದಿದೆ.  ಆಗಸ್ಟ್ 8 ರೊಳಗೆ ಎರಡೂ ಕಡೆಯಿಂದ ಚುನಾವಣಾ ಆಯೋಗ ಸಾಕ್ಷ್ಯವನ್ನು ಕೇಳಿರುವ ಆಯೋಗ ನಂತರ ಇದರ ಬಗ್ಗೆ ವಿಚಾರಣೆ ನಡೆಸಲಿದೆ.

15 ಶಾಸಕರ ಗುಂಪು 39 ರ ಗುಂಪನ್ನು ಬಂಡುಕೋರರು ಎಂದು ಕರೆಯಲು ಸಾಧ್ಯವಿಲ್ಲ. ಇದು ವಾಸ್ತವಕ್ಕೆ ವಿರುದ್ಧವಾಗಿದೆ ಎಂದು ಇಂದು ಶಿಂಧೆ ಬಣ ಅರ್ಜಿಗ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಗೆ ಹೇಳಿದೆ.

SCROLL FOR NEXT