ದೇಶ

ಐಎಸ್ಐಎಸ್ ಪ್ರಕರಣ: ರಾಜ್ಯದ ಭಟ್ಕಳ, ತುಮಕೂರು, 5 ರಾಜ್ಯಗಳಲ್ಲಿ ಎನ್ಐಎ ಶೋಧ ಕಾರ್ಯಾಚರಣೆ

Srinivas Rao BV

ಬೆಂಗಳೂರು: ರಾಷ್ಟ್ರೀಯ ತನಿಖಾ ದಳ (ಎನ್ಐಎ) ರಾಜ್ಯದ ಭಟ್ಕಳ, ತುಮಕೂರು ಹಾಗೂ 5 ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದೆ.

ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಸಿರಿಯಾ (ISIS) ಶಂಕಿತರಿಗೆ ಸಂಬಂಧಿಸಿದಂತೆ ರಾಜ್ಯವೂ ಸೇರಿ, ಭೋಪಾಲ್, ರೈಸನ್ (ಮಧ್ಯಪ್ರದೇಶ)  13 ಕಡೆಗಳಲ್ಲಿ ಎನ್ಐಎ ದಾಳಿ ನಡೆದಿದ್ದು, ಗುಜರಾತ್ ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್, ಬಿಹಾರದ ಅರಾರಿಯಾ, ಮಹಾರಾಷ್ಟ್ರದ ಕೊಲ್ಹಾಪುರ, ನಾಂದೇಡ್ ಜಿಲ್ಲೆಗಳು, ಉತ್ತರ ಪ್ರದೇಶದ ದೇವಬಂದ್ ಜಿಲ್ಲೆಗಳಲ್ಲಿ ದಾಳಿ ನಡೆದಿದೆ.

ಐಎಸ್ಐಎಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ 30 ವರ್ಷದ ಅಬ್ದುಲ್ ಮುಕ್ತದೀರ್ ಹಾಗೂ ಆತನ ಸಹೋದರನನ್ನು ಎನ್ಐಎ ವಶಕ್ಕೆ ಪಡೆದಿದ್ದರೆ, ತುಮಕೂರಿನಲ್ಲಿ ರಂಗಸ್ವಾಮಿ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದ ಸಾಜಿದ್ ಮಕ್ರಾನಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಪಿಎಫ್‌ಐನ ಉಗ್ರ ಸಂಪರ್ಕ: ಮೋತಿಹಾರಿ, ನಳಂದಾ ಮತ್ತು ದರ್ಭಾಂಗನಲ್ಲಿ ಎನ್ಐಎ ದಾಳಿ
 
ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳ, ಭಾಷೆಗಳ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಮೂಡಿಸುತ್ತಿರುವ ವಿಷಯವಾಗಿ ಐಪಿಸಿ ಸೆಕ್ಷನ್ 153 (ಎ) ಹಾಗೂ 153 (ಬಿ) ಅಡಿಯಲ್ಲಿ ಎನ್ಐಎ ಜೂ.25 ರಂದು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. "ಶೋಧ ಕಾರ್ಯಾಚರಣೆ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ" ಎಂದು ಎನ್ಐಎ ತಿಳಿಸಿದೆ.

SCROLL FOR NEXT