ಧೀರೇಂದ್ರ ಸಿಂಗ್ 
ದೇಶ

ಉತ್ತರಪ್ರದೇಶ: ಸೈಕಲ್ ಸವಾರಿ ವೇಳೆ ರಸ್ತೆ ಗುಂಡಿಗೆ ಬಿದ್ದು ಬಿಜೆಪಿ ಶಾಸಕನಿಗೆ ಗಾಯ!

ಸೈಕಲ್ ಸವಾರಿ ವೇಳೆ ರಸ್ತೆ ಗುಂಡಿಗೆ ಬಿದ್ದ ಬಿಜೆಪಿ ಶಾಸಕರೊಬ್ಬರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ನೋಯ್ಡಾ: ಸೈಕಲ್ ಸವಾರಿ ವೇಳೆ ರಸ್ತೆ ಗುಂಡಿಗೆ ಬಿದ್ದ ಬಿಜೆಪಿ ಶಾಸಕರೊಬ್ಬರು ಗಾಯಗೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಜೇವರ್ ಶಾಸಕ ಧೀರೇಂದ್ರ ಸಿಂಗ್ ಅವರು ತಮ್ಮ ಕ್ಷೇತ್ರದಲ್ಲಿ ಸೈಕಲ್ ಸವಾರಿ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಸಹಚರರು ಹೇಳಿದ್ದಾರೆ. 55 ವರ್ಷದ ಸಿಂಗ್ ತನ್ನ ಬೈಸಿಕಲ್‌ನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದಾಗ ರಾತ್ರಿ 7.30 ರ ಸುಮಾರಿಗೆ ಕಿಶೋರ್‌ಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. 

'ಶಾಸಕರು ನಿತ್ಯ ಸೈಕ್ಲಿಂಗ್‌ ಮಾಡುತ್ತಾರೆ. ಅದರಂತೆ ನಿನ್ನೆ ರಾತ್ರಿ ತೆರಳಿದ್ದರು. ಈ ವೇಳೆ ತುಂತುರು ಮಳೆಯಾಗುತ್ತಿತ್ತು. ಅವರ ಬೈಸಿಕಲ್ ಗುಂಡಿಗೆ ಬಿದ್ದಿದ್ದರಿಂದ ಮೊಣಕೈಗೆ ತೀವ್ರವಾಗಿ ಗಾಯವಾಗಿತ್ತು. ಸಿಂಗ್ ಅವರನ್ನು ಶೀಘ್ರದಲ್ಲೇ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರ ಎಡಗೈಯ ಕೆಲವು ಮೂಳೆಗಳನ್ನು ಮುರಿದಿದೆ ಎಂದು ಹೇಳಿದರು ಎಂದು ಶಾಸಕರ ಸಹವರ್ತಿ ದೇವೇಂದ್ರ ಸಿಂಗ್ ಹೇಳಿದ್ದಾರೆ. 

ಜೆವಾರ್‌ನಲ್ಲಿ ಮುಂಬರುವ ಗ್ರೀನ್‌ಫೀಲ್ಡ್ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಗ್ರಾಮಸ್ಥರೊಂದಿಗೆ ಭೂಸ್ವಾಧೀನದ ಮಾತುಕತೆಯಲ್ಲಿ ಧೀರೇಂದ್ರ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!