ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ರಾಜ್ಯಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 95ರಿಂದ 92ಕ್ಕೆ ಕುಸಿತ; ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್

ಜೂನ್ 10 ರಂದು ನಡೆದ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಂಸತ್ತಿನ ನಿರ್ಣಾಯಕ ಮೇಲ್ಮನೆಯಲ್ಲಿ ಆಡಳಿತಾರೂಢ ಬಿಜೆಪಿಯ ಸಂಖ್ಯಾಬಲ 95 ರಿಂದ 92ಕ್ಕೆ ಕುಸಿದಿದೆ. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಸಂಖ್ಯೆ ...

ಬಿಜೆಪಿ-ಕಾಂಗ್ರೆಸ್
Lingaraj Badiger
Updated On : 11 Jun 2022, 7:22 pm

ನವದೆಹಲಿ: ಜೂನ್ 10 ರಂದು ನಡೆದ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಂಸತ್ತಿನ ನಿರ್ಣಾಯಕ ಮೇಲ್ಮನೆಯಲ್ಲಿ ಆಡಳಿತಾರೂಢ ಬಿಜೆಪಿಯ ಸಂಖ್ಯಾಬಲ 95 ರಿಂದ 92ಕ್ಕೆ ಕುಸಿದಿದೆ. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಸಂಖ್ಯೆ 29 ರಿಂದ 31 ಕ್ಕೆ ಏರಿಕೆಯಾಗಿದ್ದು, ಕೈ ಸ್ವಲ್ಪ ಬಲ ಹೆಚ್ಚಿಸಿಕೊಂಡಿದೆ.

ರಾಜಸ್ಥಾನ, ಹರಿಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಲ್ಕು ರಾಜ್ಯಗಳಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳ ಪೈಕಿ 22 ರಲ್ಲಿ ಗೆದ್ದರೆ, ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದಿದೆ.

ಇದನ್ನು ಓದಿ: ಪಕ್ಷೇತರ ಶಾಸಕರನ್ನು ನಮ್ಮಿಂದ ದೂರವಿಟ್ಟು ಫಡ್ನವೀಸ್ ಪವಾಡ ಮಾಡಿದ್ದಾರೆ: ಶರದ್ ಪವಾರ್

Advertisement

Advertisement

ನಿವೃತ್ತಿ ಹೊಂದಿದ 57 ಸದಸ್ಯರ ಪೈಕಿ ಬಿಜೆಪಿ 25 ಸದಸ್ಯರನ್ನು ಹೊಂದಿತ್ತು ಮತ್ತು ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿತ್ತು.

ಇದನ್ನು ಓದಿ: ರಾಜ್ಯ ಸಭೆ ಚುನಾವಣೆ ಗೆಲುವು: ಯಶಸ್ವಿ ತಂತ್ರಗಾರಿಕೆಗಾಗಿ ಸಿಎಂ ಬೊಮ್ಮಾಯಿ ಶ್ಲಾಘಿಸಿದ ಪ್ರಧಾನಿ ಮೋದಿ

ಹೆಚ್ಚಿನ ಬಲದೊಂದಿಗೆ, ಯುವ ಮುಖಗಳನ್ನು ನಾಮನಿರ್ದೇಶನ ಮಾಡಿದ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಮೇಲ್ಮನೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟ ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement