ದೇಶ

ರಾಷ್ಟ್ರಪತಿ ಚುನಾವಣೆ ರೇಸ್ ನಲ್ಲಿ ನಾನಿಲ್ಲ: ಶರದ್ ಪವಾರ್ ಅಚ್ಚರಿ ಹೇಳಿಕೆ

Srinivasamurthy VN

ಮುಂಬೈ: ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಎಂದೇ ಹೇಳಲಾಗುತ್ತಿದ್ದ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರು ತಾವು ರಾಷ್ಟ್ರಪತಿ ಚುನಾವಣಾ ರೇಸ್ ನಲ್ಲಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಭಾರತಕ್ಕೆ ಹೊಸ ರಾಷ್ಟ್ರಪತಿ ಆಯ್ಕೆಯಾಗುವ ಸಮಯ ಬಂದಿದ್ದು, ಹೊಸ ರಾಷ್ಟ್ರಪತಿ ಯಾರಾಗಲಿದ್ದಾರೆ (President Polls) ಎಂಬ ಕುತೂಹಲ ಎಲ್ಲರಲ್ಲೂ ಹುಟ್ಟಿಕೊಂಡಿದೆ. ಬಿಜೆಪಿ ಎನ್​ಡಿಎ ಮೈತ್ರಿಕೂಟದಿಂದ (NDA) ಯಾರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ? ಕಾಂಗ್ರೆಸ್ ಯಾರಿಗೆ (Congress President Candidate) ಮಣೆ ಹಾಕಲಿದೆ? ಇತರ ಪಕ್ಷಗಳಿಂದ ಯಾರಾದರೂ ಸ್ಪರ್ಧಿಸಲಿದ್ದಾರಾ? ಹೀಗೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹುಟ್ಟಿಕೊಂಡಿವೆ.  ಈ ನಡುವೆಯ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಯಾದವ್ (Sharad Pawar) ಹೆಸರು ಕೇಳಿಬಂದಿತ್ತು. ರಾಷ್ಟ್ರಪತಿ ಹುದ್ದೆಗೆ ಶರದ್ ಪವಾರ್ ಸ್ಪರ್ಧೆಗೆ ಕಾಂಗ್ರೆಸ್ ತನ್ನ ಬೆಂಬಲವನ್ನು ನೀಡಿದೆ ಎಂದು ವರದಿಯಾಗಿತ್ತು.

ರಾಷ್ಟ್ರಪತಿ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು ಸರಣಿ ಸಭೆಗಳನ್ನು ನಡೆಸುತ್ತಿವೆ. ಈ ಸಭೆಗಳಲ್ಲಿ ಒಮ್ಮತದಿಂದ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಕುರಿತು ಚರ್ಚೆ ತೀರ್ವವಾಗಿ ನಡೆಯುತ್ತಿದೆ. ಅದರಲ್ಲೂ ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅವರನ್ನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಇಳಿಸಲು ವಿರೋಧ ಪಕ್ಷಗಳು ಮುಂದಾಗುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಈ ಕುರಿತ ಎಲ್ಲ ರೀತಿಯ ಊಹಾಪೋಹಗಳಿಗೆ ಶರದ್ ಪದಾವ್ ತೆರೆ ಎಳೆದಿದ್ದು, ತಾವು ರಾಷ್ಟ್ರಪತಿ ಚುನಾವಣೆಯ ರೇಸ್ ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಸಂಜೆ ಮುಂಬೈನಲ್ಲಿ ನಡೆದ ತಮ್ಮ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಭೆಯಲ್ಲಿ ಶರದ್ ಪವಾರ್ ಅವರು "ನಾನು ರೇಸ್‌ನಲ್ಲಿ ಇಲ್ಲ, ನಾನು ರಾಷ್ಟ್ರಪತಿ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗುವುದಿಲ್ಲ" ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ. ಆದರೆ ಶರದ್ ಪವಾರ್ ಅವರು ತಮ್ಮ ಈ ನಿರ್ಣಯವನ್ನು ಮೈತ್ರಿ ಪಕ್ಷ ಕಾಂಗ್ರೆಸ್ ಗೆ ತಿಳಿಸಿಲ್ಲ ಎನ್ನಲಾಗಿದೆ.

ಪವಾರ್ ಅವರ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಇದೆ ಎಂದು ಹೇಳಲಾಗುತ್ತಿದ್ದು, ವಿರೋಧ ಪಕ್ಷಗಳ ಬಳಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಬೇಕಾದ ಜನಪ್ರತಿನಿಧಿಗಳ ಸಂಖ್ಯೆ ಇಲ್ಲ.. ಅಥವಾ ಮತಗಳ ಸಂಖ್ಯೆಯನ್ನು ಸಂಗ್ರಹಿಸುವ ವಿಶ್ವಾಸವಿಲ್ಲ. ಇದೇ ಕಾರಣಕ್ಕಾಗಿ ಪವಾರ್ ರಾಷ್ರ್ಪಪತಿ ಅಭ್ಯರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ರಾಜ್ಯಸಭಾ ಚುನಾವಣೆಯಲ್ಲೂ ವಿರೋಧ  ಪಕ್ಷಗಳು ಭಾರಿ ಹಿನ್ನಡೆ ಅನುಭವಿಸಿದ್ದವು. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿಯು ಶಿವಸೇನೆಯ ಸಂಜಯ್ ಪವಾರ್ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಶಿವಸೇನೆಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದ ಹಲವು ಸ್ವತಂತ್ರ ಶಾಸಕರಿಂದ ಬಿಜೆಪಿ ತನ್ನ ಅಭ್ಯರ್ಥಿಯನ್ನು ಚುನಾಯಿಸುವಲ್ಲಿ ಯಶಸ್ವಿಯಾಗಿದೆ. ಇದು ಆಡಳಿತರೂಡ ಶಿವಸೇನೆಗೆ ತೀವ್ರ ಮುಖಭಂಗವಾದಂತಾಗಿದೆ.

SCROLL FOR NEXT