ದೇಶ

ಮಧ್ಯದಲ್ಲೇ ನಿಂತ ಕೇಬಲ್ ಕಾರ್: ಜೀವ ಉಳಿಸಿಕೊಳ್ಳಲು ಪ್ರಯಾಣಿಕರ ಪರದಾಟ; ವಿಡಿಯೋ ವೈರಲ್!

Vishwanath S

ಚಂಡೀಗಢ: ಹಿಮಾಚಲ ಪ್ರದೇಶದ ಪರ್ವಾನೂದಲ್ಲಿ ಸೋಮವಾರ ಮಧ್ಯಾಹ್ನ ಮಧ್ಯದಲ್ಲಿ ನಿಂತ ಕೇಬಲ್ ಕಾರಿನಲ್ಲಿ 11 ಮಂದಿ ಸಿಲುಕಿಕೊಂಡಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಸೋಲನ್ ಜಿಲ್ಲಾ ಪೊಲೀಸರ ಪ್ರಕಾರ ಪ್ರಯಾಣಿಕರನ್ನು ರಕ್ಷಿಸಲು ಕೇಬಲ್‌ನಲ್ಲಿ ಟ್ರಾಲಿಯನ್ನು ನಿಯೋಜಿಸಲಾಗಿದೆ. ರಕ್ಷಣಾ ಸಾಧನಗಳ ಸಹಾಯದಿಂದ ಪ್ರಯಾಣಿಕರನ್ನು ಕೆಳಗಿನ ಕಣಿವೆಯ ಬೆಟ್ಟದ ಮೇಲೆ ಇಳಿಸಲಾಗ್ತಿದೆ. ಟಿಂಬರ್ ಟ್ರಯಲ್ ಆಪರೇಟರ್‌ನ ತಾಂತ್ರಿಕ ತಂಡವನ್ನು ನಿಯೋಜಿಸಲಾಗಿದೆ ಮತ್ತು ಪೊಲೀಸ್ ತಂಡವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಕೇಬಲ್ ಕಾರ್ ಚಂಡೀಗಢದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ಟಿಂಬರ್ ಟ್ರಯಲ್ ಖಾಸಗಿ ರೆಸಾರ್ಟ್‌ನ ಜನಪ್ರಿಯ ವೈಶಿಷ್ಟ್ಯವಾಗಿದೆ. ಪರ್ವಾನೂ ಹರಿಯಾಣ, ಪಂಜಾಬ್ ಮತ್ತು ಚಂಡೀಗಢಗಳೊಂದಿಗೆ ಹಿಮಾಚಲ ಪ್ರದೇಶದ ತುದಿಯಲ್ಲಿರುವ ಕಾರಣ ಈ ಪ್ರದೇಶದಾದ್ಯಂತ ಜನರು ಇದನ್ನು ಆಗಾಗ್ಗೆ ಭೇಟಿ ಮಾಡುತ್ತಾರೆ.

ಇಂದಿನ ಘಟನೆ ಅಕ್ಟೋಬರ್ 1992 ರಲ್ಲಿನಡೆದ ಇಂಥದ್ದೇ ಘಟನೆ ನೆನಪಾಗುವೆತೆ ಮಾಡಿದೆ. ಆ ವೇಳೆ  ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ ಸೇನೆ ಮತ್ತು ವಾಯುಪಡೆಯ ಕಾರ್ಯಾಚರಣೆಯಲ್ಲಿ 10 ಜನರನ್ನು ರಕ್ಷಿಸಲಾಯಿತು.

SCROLL FOR NEXT