ದೇಶ

ವಿಶ್ವಸಂಸ್ಥೆ ಭಾರತದ ಕಾಯಂ ಪ್ರತಿನಿಧಿಯಾಗಿ ರುಚಿರಾ ಕಾಂಬೋಜ್ ನೇಮಕ

Srinivasamurthy VN

ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ರುಚಿರಾ ಕಾಂಬೋಜ್ ಅವರನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿ ಮಂಗಳವಾರ ನೇಮಕ ಮಾಡಲಾಗಿದೆ. 

ಭಾರತೀಯ ವಿದೇಶಾಂಗ ಸೇವೆಯ (ಐಎಫ್ಎಸ್‌) 1987ರ ಬ್ಯಾಚ್‌ನ ಅಧಿಕಾರಿಯಾಗಿರುವ ರುಚಿರಾ ಅವರು ಪ್ರಸ್ತುತ ಭೂತಾನ್‌ನಲ್ಲಿ ಭಾರತೀಯ ರಾಯಭಾರಿಯಾಗಿದ್ದಾರೆ.

ರುಚಿರಾ ಅವರು ಶೀಘ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಅವರು ಟಿ ಎಸ್ ತಿರುಮೂರ್ತಿ ಅವರ ನಂತರ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿಯಾಗಲಿದ್ದಾರೆ. 

ಕಾಂಬೋಜ್ ಅವರು ಶೀಘ್ರದಲ್ಲೇ ನಿಯೋಜನೆಯನ್ನು ಸ್ವೀಕರಿಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT