ದೇಶ

ಟಿಎಂಸಿ ತೊರೆದ ಯಶ್ವಂತ್ ಸಿನ್ಹಾ: ವಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಅವರು ಹೇಳಿದ್ದಿಷ್ಟು...

Srinivas Rao BV

ನವದೆಹಲಿ: ಟಿಎಂಸಿ ನಾಯಕ ಯಶ್ವಂತ್ ಸಿನ್ಹಾ ಮಂಗಳವಾರದಂದು ಪಕ್ಷ ತೊರೆಯುವುದನ್ನು ಘೋಷಿಸಿದ್ದು, ಉನ್ನತವಾದ ರಾಷ್ಟ್ರೀಯ ಕಾರಣಕ್ಕಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. 

ವಿಪಕ್ಷಗಳಲ್ಲಿ ಇನ್ನೂ ಹೆಚ್ಚಿನ ಒಗ್ಗಟ್ಟು ಅಗತ್ಯವಿದ್ದು, ಈ ನಿಟ್ಟಿನಲ್ಲಿ ತಾವು ಕೆಲಸ ಮಾಡುವುದಾಗಿ ಯಶ್ವಂತ್ ಸಿನ್ಹಾ ಘೋಷಿಸಿದ್ದಾರೆ. 

ಯಶ್ವಂತ್ ಸಿನ್ಹಾ ಅವರನ್ನು ವಿಪಕ್ಷಗಳ ಒಕ್ಕೂಟ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಸರತ್ತು ನಡೆಸುತ್ತಿರುವಾಗಲೇ ಯಶ್ವಂತ್ ಸಿನ್ಹಾ ಟಿಎಂಸಿ ತೊರೆದಿರುವುದು ಅಚ್ಚರಿ ಮೂಡಿಸಿದೆ. 

ನನಗೆ ಸಿಕ್ಕ ಗೌರವ ಹಾಗೂ ಪಕ್ಷದಲ್ಲಿ ತೋರಿದ ಘನತೆಗಳಿಗೆ ನಾನು ಮಮತಾ ಬ್ಯಾನರ್ಜಿ ಅವರಿಗೆ ಆಭಾರಿಯಾಗಿದ್ದೇನೆ. ಈಗ ಇನ್ನೂ ಹೆಚ್ಚಿನ ರಾಷ್ಟ್ರಕಾರಣಕ್ಕೆ ಸಮಯ ಬಂದಿದೆ. ವಿಪಕ್ಷಗಳ ಒಗ್ಗಟ್ಟಿಗಾಗಿ ಕೆಲಸ ಮಾಡಲು ನಾನು ಪಕ್ಷ ತೊರೆಯುತ್ತಿದ್ದೇನೆ. ಈ ನಡೆಯನ್ನು ಮಮತಾ ಬ್ಯಾನರ್ಜಿ ಅನುಮೋದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿನ್ಹಾ ಟ್ವೀಟ್ ಮೂಲಕ ತಿಳಿಸಿದ್ದಾರೆ. 

ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಂಬಂಧ ವಿಪಕ್ಷಗಳು ಜೂ.21 ರಂದು ದೆಹಲಿಯಲ್ಲಿ ಸಭೆ ನಡೆಸಲಿವೆ. 

SCROLL FOR NEXT