ದೇಶ

'ರಾಷ್ಟ್ರೀಯ ಪಕ್ಷ' ಎಲ್ಲ ರೀತಿಯ ಸಹಾಯದ ಭರವಸೆ ನೀಡಿದೆ: ಏಕನಾಥ್ ಶಿಂಧೆ

Srinivasamurthy VN

ಮುಂಬೈ: ಮಹಾರಾಷ್ಟ್ರ ರಾಜಕೀಯ ಸಂಘರ್ಷ ಮುಂದುವರೆದಿರುವಂತೆಯೇ ಬಂಡಾಯ ಶಾಸಕರ ಬಣಕ್ಕೆ 'ರಾಷ್ಟ್ರೀಯ ಪಕ್ಷ'ವೊಂದು ಎಲ್ಲ ರೀತಿಯ ಸಹಾಯದ ಭರವಸೆ ನೀಡಿದೆ ಎಂದು ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಹೇಳಿದ್ದಾರೆ.

ತಮ್ಮದೇ ಆಡಳಿತಾ ರೂಢ ಶಿವಸೇನೆ ಪಕ್ಷದ ವಿರುದ್ಧ ಬಂಡಾಯವೆದ್ದು ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಪತನದ ಅಂಚಿಗೆ ತಳ್ಳಿರುವ ಶಿವಸೇನಾ ನಾಯಕ ಏಕನಾಥ್ ಶಿಂಧೆ, ‘ರಾಷ್ಟ್ರೀಯ ಪಕ್ಷ’ವೊಂದು ತಮ್ಮ ಬಂಡಾಯವನ್ನು ‘ಐತಿಹಾಸಿಕ’ ಎಂದು ಬಣ್ಣಿಸಿದೆ ಮತ್ತು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದೆ ಎಂದು ಹೇಳಿದ್ದಾರೆ.

ಗುವಾಹಟಿಯ ಹೋಟೆಲ್‌ನಲ್ಲಿ ಬಂಡಾಯ ಶಾಸಕರ ಗುಂಪನ್ನು ಉದ್ದೇಶಿಸಿ ಶಿಂಧೆ ಮಾತನಾಡುತ್ತಿರುವ ವಿಡಿಯೋವನ್ನು ಮುಂಬೈನಲ್ಲಿರುವ ಅವರ ಕಚೇರಿ ಬಿಡುಗಡೆ ಮಾಡಿದ್ದು, ಶಾಸಕರು ತಮ್ಮ ಗುಂಪಿನ ನಾಯಕರಾಗಿ ತಮ್ಮ ಪರವಾಗಿ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲು ಶಿಂಧೆ ಅವರಿಗೆ ಸರ್ವಾನುಮತದಿಂದ ಅಧಿಕಾರ ನೀಡಿದ್ದಾರೆ ಎಂದು ವೀಡಿಯೊ ಹೇಳಲಾಗಿದೆ. ಆದಾಗ್ಯೂ, ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ನರಹರಿ ಝಿರ್ವಾಲ್ ಅವರು ಶಿಂಧೆ ಬದಲಿಗೆ ಅಜಯ್ ಚೌಧರಿ ಅವರನ್ನು ಸದನದಲ್ಲಿ ಶಿವಸೇನೆ ಗುಂಪಿನ ನಾಯಕರಾಗಿ ನೇಮಿಸಲು ಈ ಹಿಂದೆ ಅನುಮೋದನೆ ನೀಡಿದ್ದಾರೆ.

ವೀಡಿಯೋದಲ್ಲಿ ಶಿಂಧೆ, "ನಮ್ಮ ಚಿಂತೆ ಮತ್ತು ಸಂತೋಷ ಒಂದೇ. ನಾವು ಒಗ್ಗಟ್ಟಾಗಿದ್ದೇವೆ ಮತ್ತು ಗೆಲುವು ನಮ್ಮದೇ ಆಗಿರುತ್ತದೆ. ಒಂದು ರಾಷ್ಟ್ರೀಯ ಪಕ್ಷವಿದೆ, 'ಮಹಾಶಕ್ತಿ' ಇದೆ, ಅವರು ಪಾಕಿಸ್ತಾನವನ್ನು ಸೋಲಿಸಿದರು ಎಂದು ನಿಮಗೆ ತಿಳಿದಿದೆ, ಆ ಪಕ್ಷವು ನಮಗೆ ಎಲ್ಲ ರೀತಿಯ ನೆರವು ಘೋಷಣೆ ಮಾಡಿದೆ. ನಾವು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಲ್ಲಾ ಸಹಾಯವನ್ನು ಒದಗಿಸುವುದಾಗಿ ಭರವಸೆ ನೀಡಿದೆ ಎಂದು  ಹೇಳಿದ್ದಾರೆ.

ಶಿಂಧೆ ಪ್ರಸ್ತುತ ಗುವಾಹಟಿಯಲ್ಲಿ ಶಿವಸೇನೆಯ 37 ಬಂಡಾಯ ಶಾಸಕರು ಮತ್ತು ಒಂಬತ್ತು ಸ್ವತಂತ್ರ ಶಾಸಕರೊಂದಿಗೆ ಬೀಡುಬಿಟ್ಟಿದ್ದಾರೆ.

SCROLL FOR NEXT