ವಿ ಕೃಷ್ಣಮೂರ್ತಿ 
ದೇಶ

ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ ಕೃಷ್ಣಮೂರ್ತಿ ನಿಧನ

ಸಾರ್ವಜನಿಕ ವಲಯದ ಉದ್ದಿಮೆ ಭಾರತೀಯ ಉಕ್ಕು ಪ್ರಾಧಿಕಾರ(ಎಸ್ಎಐಎಲ್)ದ ಮಾಜಿ ಅಧ್ಯಕ್ಷ ಹಾಗೂ  ಮಾರುತಿ ಉದ್ಯೋಗ್ ಲಿಮಿಟೆಡ್‌ನ(ಈಗ ಮಾರುತಿ ಸುಜುಕಿ) ಮಾಜಿ ಅಧ್ಯಕ್ಷರಾದ ವಿ ಕೃಷ್ಣಮೂರ್ತಿ ಅವರು ಭಾನುವಾರ...

ನವದೆಹಲಿ: ಸಾರ್ವಜನಿಕ ವಲಯದ ಉದ್ದಿಮೆ ಭಾರತೀಯ ಉಕ್ಕು ಪ್ರಾಧಿಕಾರ(ಎಸ್ಎಐಎಲ್)ದ ಮಾಜಿ ಅಧ್ಯಕ್ಷ ಹಾಗೂ  ಮಾರುತಿ ಉದ್ಯೋಗ್ ಲಿಮಿಟೆಡ್‌ನ(ಈಗ ಮಾರುತಿ ಸುಜುಕಿ) ಮಾಜಿ ಅಧ್ಯಕ್ಷರಾದ ವಿ ಕೃಷ್ಣಮೂರ್ತಿ ಅವರು ಭಾನುವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.

ಕೃಷ್ಣಮೂರ್ತಿ ಅವರು ಚೆನ್ನೈನಲ್ಲಿರುವ ಅವರ ಮನೆಯಲ್ಲಿ ಇಂದು ನಿಧನರಾದರು ಎಂದು ಅವರ ಮಾಜಿ ಸಹೋದ್ಯೋಗಿಯೊಬ್ಬರು ಮಾಹಿತಿ ನೀಡಿದ್ದಾರೆ ಎಂದು ಎಸ್ಎಐಎಲ್ ಪ್ರಕಟಣೆ ತಿಳಿಸಿದೆ.

ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಕೃಷ್ಣಮೂರ್ತಿ ಅವರ ಅಂತಿಮ ಸಂಸ್ಕಾರ ಸೋಮವಾರ ನೆರವೇರಲಿದೆ.

ವಿ ಕೃಷ್ಣಮೂರ್ತಿ ಅವರು 1985 ರಿಂದ 1990 ರವರೆಗೆ ಎಸ್ಎಐಎಲ್ ನ ಅಧ್ಯಕ್ಷರಾಗಿದ್ದರು. ಅಲ್ಲದೆ ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್(BHEL),ಮಾರುತಿ ಉದ್ಯೋಗ್ ಮತ್ತು GAILನ ಅಧ್ಯಕ್ಷರಾಗಿಯೂ ಕೃಷ್ಣಮೂರ್ತಿ ಸೇವೆ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!