ದೇಶ

ಪಂಜಾಬ್: ಸರಬ್ಜಿತ್ ಸಿಂಗ್ ಸಹೋದರಿ ದಲ್ಬೀರ್ ಕೌರ್ ನಿಧನ

Nagaraja AB

ಪಂಜಾಬ್: ಗೂಢಚಾರಿಕೆ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿ ಪಾಕಿಸ್ತಾನದ ಕೋರ್ಟ್ ನಿಂದ ಮರಣದಂಡನೆಗೆ ಗುರಿಯಾಗಿ 2013ರಲ್ಲಿ ಲಾಹೋರ್ ಜೈಲಿನಲ್ಲಿ ನಿಧನರಾಗಿದ್ದ ಸರಬ್ಜಿತ್ ಸಿಂಗ್ ಅವರ ಸಹೋದರಿ ದಲ್ಬೀರ್ ಸಿಂಗ್ ಶನಿವಾರ ರಾತ್ರಿ ಸಾವನ್ನಪ್ಪಿದ್ದಾರೆ. ಪಂಜಾಬಿನ ಭಿಖಿವಿಂಡ್ ಗ್ರಾಮದಲ್ಲಿ ಇಂದು ಅವರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಭಾರತ- ಪಾಕಿಸ್ತಾನ ಗಡಿ ಬಳಿಯ ಭಿಖಿವಿಂಡ್ ಗ್ರಾಮದ ರೈತರಾಗಿದ್ದ ಸರಬ್ಜಿತ್ ಸಿಂಗ್ ಸ್ವಲ್ಪ ಪ್ರಮಾಣದ ಮದ್ಯ ಸೇವಿಸಿದ ನಂತರ ತಿಳಿಯದೆ ಪಾಕ್ ಗಡಿ ಪ್ರವೇಶಿಸಿದ್ದರು. ಆದಾಗ್ಯೂ, ಅವರಿಗೆ ಪಾಕ್ ಕೋರ್ಟ್ 1991ರಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

 22 ವರ್ಷಗಳ ಕಾಲ ಲಾಹೋರ್ ಜೈಲಿನಲ್ಲಿದ್ದ ಸರಬ್ಜಿತ್ ಸಿಂಗ್ ಮೇಲೆ 2013ರಲ್ಲಿ ಕೈದಿಗಳು ಹಲ್ಲೆ ನಡೆಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.

 ಸರಬ್ಜಿತ್ ಸಿಂಗ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲು ದಲ್ಬೀರ್ ಕೌರ್ ಸುಧೀರ್ಘ ಕಾನೂನು ಹೋರಾಟ ನಡೆಸಿದ್ದರು. 
 

SCROLL FOR NEXT