ಏಕನಾಥ್ ಶಿಂಧೆ 
ದೇಶ

ರಾಜ್ ಠಾಕ್ರೆ ಜೊತೆ ಏಕನಾಥ್ ಶಿಂಧೆ ಎರಡು ಬಾರಿ ಮಾತುಕತೆ: ಹೆಚ್ಚಿದ ಕುತೂಹಲ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ದಿನಕಳೆಯುತ್ತಿದ್ದಂತೆಯೇ ಕುತೂಹಲ ಹೆಚ್ಚಾಗುವಂತೆ ಮಾಡಿದ್ದು, ಈ ನಡುವಲ್ಲೇ ಶಿವಸೇನೆ ನಾಯಕ ಏಕನಾಥ್ ಶಿಂದೆ ಅವರು, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ...

ಮುಂಬೈ: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ದಿನಕಳೆಯುತ್ತಿದ್ದಂತೆಯೇ ಕುತೂಹಲ ಹೆಚ್ಚಾಗುವಂತೆ ಮಾಡಿದ್ದು, ಈ ನಡುವಲ್ಲೇ ಶಿವಸೇನೆ ನಾಯಕ ಏಕನಾಥ್ ಶಿಂದೆ ಅವರು, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರೊಂದಿಗೆ ಎರಡು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆಂದು ಹೇಳಲಾಗುತ್ತಿದೆ. ಈ ಬೆಳವಣಿಗೆಯು ಸಾಕಷ್ಟು ಕುತೂಹಲವನ್ನುಂಟು ಮಾಡಿದೆ. 

ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಶಿಂದೆ ಅವರು, ಠಾಕ್ರೆ ಅವರೊಂದಿಗೆ ಮಾತನಾಡಿದ್ದು, ಇದೇ ವೇಳೆ, ಅವರ ಆರೋಗ್ಯದ ಬಗ್ಗೆಯೂ ವಿಚಾರಿಸಿದ್ದಾರೆ ಎಂದು ಎಂಎನ್‌ಎಸ್ ನಾಯಕರೊಬ್ಬರು ಎಎನ್ಐ ಸುದ್ದಿಸಂಸ್ಥೆಗೆ ಹೇಳಿಕೆ ನೀಡಿದ್ದಾರೆ. 

ಈ ನಡುವೆ ಬಂಡಾಯವೆದ್ದಿರುವ ನಾಯಕರ ವಿರುದ್ಧ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. 

ಮೂರು ಪಕ್ಷಗಳು ಬಂಡಾಯ ಶಾಸಕರನ್ನು ಅನರ್ಹತೆ ಮಾಡುವುದು ಮತ್ತು ಪಕ್ಷದಿಂದ ಅಮಾನತು ಮಾಡಲು ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಸಂಘರ್ಷ ತೀವ್ರ: Hormuz ಜಲಸಂಧಿ ಬಳಿ ಅಮೆರಿಕ ಭೀಕರ ವೈಮಾನಿಕ ದಾಳಿ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ..!

ಬದಲಾದ ಸಂಸತ್ ಬಲಾಬಲದ ನಡುವೆ ಮುಂಗಾರು ಅಧಿವೇಶನ; ಜು.19 ರಂದು ಸರ್ವಪಕ್ಷಗಳ ಸಭೆ; ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆ ಸಜ್ಜು..!

2028 ವಿಧಾನಸಭಾ ಚುನಾವಣೆ: BJP ಬಣ ಬಡಿದಾಟದ ಲಾಭ JDSಗೆ?; NDA ಸಿಎಂ ರೇಸ್‌ನಲ್ಲಿ ಕುಮಾರಸ್ವಾಮಿ ಹೆಸರು ಮುನ್ನೆಲೆಗೆ..!

Bangkok pubನಲ್ಲಿ ಭೀಕರ ಅಗ್ನಿ ಅವಘಡ; 27 ಮಂದಿ ಸಜೀವ ದಹನ; 63ಕ್ಕೂ ಹೆಚ್ಚು ಮಂದಿಗೆ ಗಾಯ, ವಿದ್ಯುತ್ ದೋಷವೇ ದುರಂತಕ್ಕೆ ಕಾರಣ?

ರಾಹುಲ್ ದ್ರಾವಿಡ್ ಇಂಗ್ಲೆಂಡ್ ಟೆಸ್ಟ್ ತಂಡದ ಮುಂದಿನ ಕೋಚ್ ಆಗ್ತಾರಾ?