ದೇಶ

ಒಂದೇ ಚುನಾವಣೆಯಲ್ಲಿ 4 ದಾಖಲೆ ಬರೆದ ಯೋಗಿ ಆದಿತ್ಯನಾಥ್

Srinivas Rao BV

ಉತ್ತರ ಪ್ರದೇಶದಲ್ಲಿ ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಗೆಲುವು ಸಾಧಿಸಿದ್ದು ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ. ಈ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಬರೊಬ್ಬರಿ 4 ದಾಖಲೆಗಳನ್ನು ನಿರ್ಮಿಸಿದ್ದಾರೆ. 

ದಾಖಲೆ ನಂ.1
ಉತ್ತರ ಪ್ರದೇಶದಲ್ಲಿ 37 ವರ್ಷಗಳಿಂದ ಯಾವುದೇ ಓರ್ವ ಮುಖ್ಯಮಂತ್ರಿಯೂ 2 ನೇ ಬಾರಿಗೆ ಅಧಿಕಾರ ಉಳಿಸಿಕೊಂಡಿರಲಿಲ್ಲ. ಇದಕ್ಕೆ ಯೋಗಿ ಆದಿತ್ಯನಾಥ್  ಅಪವಾದವಾಗಿದ್ದು, 2 ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲಿದ್ದಾರೆ. 

ದಾಖಲೆ ನಂ.2
ನೊಯ್ಡಾಗೆ ಭೇಟಿ ನೀಡಿದರೆ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂಬ ಮೌಢ್ಯ ಉತ್ತರ ಪ್ರದೇಶದಲ್ಲಿ ಆವರಿಸಿತ್ತು. ಇದೇ ಕಾರಣದಿಂದಾಗಿ ಅಖಿಲೇಶ್ ಯಾದವ್ ಸೇರಿದಂತೆ ಹಲವು ಸಿಎಂಗಳು ನೊಯ್ಡಾಗೆ ತಮ್ಮ ಅಧಿಕಾರದ ಅವಧಿಯಲ್ಲಿ ಭೇಟಿ ನೀಡಿರಲಿಲ್ಲ.  ಆದರೆ ಸಿಎಂ ಯೋಗಿ ಆದಿತ್ಯನಾಥ್ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ನೊಯ್ಡಾಗೆ ಭೇಟಿ ನೀಡಿದ್ದರು. 

ದಾಖಲೆ ನಂ.3

ಬಿಜೆಪಿಯಿಂದ ಈ ವರೆಗೂ ಉತ್ತರಪ್ರದೇಶದಲ್ಲಿ ನಾಲ್ವರು ಮುಖ್ಯಮಂತ್ರಿಗಳಾಗಿದ್ದಾರೆ. ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ, ಹಾಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮೂವರು ಉತ್ತರ ಪ್ರದೇಶ ಮುಖ್ಯಮಂತ್ರಿಗಳಾಗಿದ್ದರು. ಆದರೆ ಇವರ್ಯಾರೂ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಸಾಧ್ಯವಾಗಿರಲಿಲ್ಲ. ಆದರೆ ಯೋಗಿ ಆದಿತ್ಯನಾಥ್ ಬಿಜೆಪಿಯನ್ನು ಎರಡನೇ ಬಾರಿಗೆ ತಂದಿದ್ದಾರೆ.

ದಾಖಲೆ ನಂ.4

ಉತ್ತರ ಪ್ರದೇಶದಲ್ಲಿ ಒಂದುವರೆ ದಶಕಗಳ ಅವಧಿಯಲ್ಲಿ ಯಾರೂ ಚುನಾವಣೆ ಎದುರಿಸಿ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿರಲಿಲ್ಲ. ಆದರೆ ಈ ಬಾರಿ ಸಿಎಂ ಆಗುತ್ತಿರುವ ಯೋಗಿ ಆದಿತ್ಯನಾಥ್ ಗೋರಖ್ ಪುರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿ ಮುಖ್ಯಮಂತ್ರಿಯಾಗುತ್ತಿದ್ದಾರೆ. ಈ ಹಿಂದೆ ಯೋಗಿ ಆದಿತ್ಯನಾಥ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಖ್ಯಮಂತ್ರಿಯಾಗಿದ್ದರು. ಈ ಬಾರಿ ಯೋಗಿ ಆದಿತ್ಯನಾಥ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರೆ, 15 ವರ್ಷದ ಬಳಿಕ ವಿಧಾನಸಭೆಯಿಂದ ಆಯ್ಕೆಯಾದ ಶಾಸಕರೊಬ್ಬರು ಸಿಎಂ ಆದಂತಾಗಲಿದೆ.

SCROLL FOR NEXT