ದೇಶ

ಇಡೀ ಉತ್ತರ ಪ್ರದೇಶ ಗೆದ್ದರೂ, ಪರಮಾಪ್ತ ಕೇಶವ್ ಮೌರ್ಯ ಗೆಲ್ಲಿಸಿಕೊಳ್ಳುವಲ್ಲಿ 'ಯೋಗಿ' ವಿಫಲ!

Srinivasamurthy VN

ಲಖನೌ: ಉತ್ತರ ಪ್ರದೇಶ ದಾಖಲೆಯ 2ನೇ ಬಾರಿಗೆ ಬಿಜೆಪಿ ತೆಕ್ಕೆಗೆ ಜಾರಿದ್ದು, ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಇಡೀ ಉತ್ತರ ಪ್ರದೇಶವನ್ನೇ ಗೆದ್ದರು ಯೋಗಿ ಆಪ್ತ ಕೇಶವ್ ಮೌರ್ಯ ಮಾತ್ರ ತಮ್ಮದೇ ಸ್ನಕ್ಷೇತ್ರದಲ್ಲೇ ಸೋಲು ಕಂಡು ಮುಜುಗರಕ್ಕೀಡಾಗಿದ್ದಾರೆ.

ಹೌದು.. ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಅವರು ತಮ್ಮದೇ ಸ್ವಕ್ಷೇತ್ರದಲ್ಲಿ ಸೋಲು ಕಾಣುವ ಮೂಲಕ ತೀವ್ರ ಮುಜುಗರಕ್ಕೀಡಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಭಾರೀ ಗೆಲುವಿನ ನಡುವೆಯೇ ಸಿರತು ಕ್ಷೇತ್ರದಲ್ಲಿ ಕೇಶವ್ ಮೌರ್ಯ ಸೋತಿದ್ದಾರೆ. ಸಮಾಜವಾದಿ ಪಕ್ಷದ ಬ್ಯಾನರ್ ಅಡಿಯಲ್ಲಿ ಸ್ಪರ್ಧಿಸಿದ್ದ ಅಪ್ನಾ ದಳ (ಕಾಮೆರವಾಡಿ) ನಾಯಕಿ ಪಲ್ಲವಿ ಪಟೇಲ್ 6,832 ಮತಗಳ ಅಂತರದಿಂದ ಕೇಶವ್ ಮೌರ್ಯ ಅವರ ವಿರುದ್ಧ ಗೆದ್ದಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೈವೋಲ್ಟೇಜ್ ಪ್ರಚಾರಕ್ಕೆ ಚಾಲನೆ ನೀಡಿದ್ದರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಪ್ರಚಾರ ಮಾಡಿದ್ದರು. ಪ್ರಧಾನಿ ಮೋದಿಯವರಲ್ಲದೆ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ನಿತಿನ್ ಗಡ್ಕರಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಮತ್ತು ಮುಖ್ಯವಾಗಿ ಪಲ್ಲವಿ ಪಟೇಲ್ ಅವರ ಸಹೋದರಿ ಅನುಪ್ರಿಯಾ ಪಟೇಲ್ ಕೂಡ ಅವರ ಪರವಾಗಿ ಪ್ರಚಾರ ನಡೆಸಿದ್ದರು. ಆದರೆ ಈ ಪ್ರಚಾರ ಯಾವುದೂ ಕೇಶವ್ ಮೌರ್ಯ ಅವರ ಕೈ ಹಿಡಿದಿಲ್ಲ. 

ಯಾರು ಈ ಅನುಪ್ರಿಯಾ?
ಅನುಪ್ರಿಯಾ ಪಟೇಲ್ ಅಪ್ನಾ ದಳ (ಸೋನೆಲಾಲ್) ಮುಖ್ಯಸ್ಥರಾಗಿದ್ದು, ಇದು ವರ್ಷಗಳಿಂದ ಬಿಜೆಪಿಯ ಪಾಲುದಾರಿಕೆ ಹೊಂದಿದೆ. ಕಾಮೆರವಾಡಿ ವಿಭಾಗವು ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಹೊಂದಿತ್ತು, ವಾರಣಾಸಿ-ಮಿರ್ಜಾಪುರ ಪ್ರದೇಶ, ಬುಂದೇಲ್‌ಖಂಡ್ ಮತ್ತು ಮಧ್ಯ ಉತ್ತರ ಪ್ರದೇಶದ ಜಿಲ್ಲೆಗಳಲ್ಲಿ ಅಪ್ನಾ ದಳ ಸಾಕಷ್ಟು ನಿಷ್ಠ ಮತದಾರರನ್ನು ಹೊಂದಿದೆ. ಪೂರ್ವ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿರುವ ಸಿರತು, ಅಪ್ನಾ ದಳದ ಬೆಂಬಲಿಗರ ದೊಡ್ಡ ವಿಭಾಗವನ್ನೇ ಹೊಂದಿದೆ. ಇದು ಆ ಪಕ್ಷದ ಗೆಲುವಿಗೆ ಕಾರಣ ಎನ್ನಲಾಗಿದೆ. 
 

SCROLL FOR NEXT