ದೇಶ

ಒಡಿಶಾ ರಾಜಭವನದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನ

Ramyashree GN

ಭುವನೇಶ್ವರ: ಇಲ್ಲಿನ ಅತ್ಯಂತ ಭದ್ರತೆಯಿರುವ ರಾಜಭವನ ಆವರಣದಲ್ಲಿದ್ದ ಶ್ರೀಗಂಧದ ಮರವನ್ನು ಕಡಿದು ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಮಂಗಳವಾರ ಮರ ಕಡಿಯಲಾಗಿದ್ದು, ಈ ಬಗ್ಗೆ ರಾಜಭವನ ಇಲ್ಲಿನ ರಾಜಧಾನಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದೆ.

ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ, ಈವರೆಗೆ ಕಳ್ಳರ ಸುಳಿವು ಸಿಕ್ಕಿಲ್ಲ. ಪ್ರಕರಣದಲ್ಲಿ ಕೆಲವರ ಮೇಲೆ ಶಂಕೆ ವ್ಯಕ್ತವಾಗಿದ್ದು, ನಿಜವಾದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಗಂಧದ ಮರದ ಕಡಿಯುವುದು ಮತ್ತು ಸಾಗಣೆಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವ ಅಗತ್ಯವಿದೆ. ಈ ಮರವನ್ನು ಪ್ರಾಥಮಿಕವಾಗಿ ಶ್ರೀಗಂಧದ ಎಣ್ಣೆಯನ್ನು ಹೊರತೆಗೆಯಲು ಬಳಸಲಾಗುತ್ತದೆ.

ಭಾರತವು ಶ್ರೀಗಂಧದ ರಫ್ತುವಿನ ಮೇಲೆ ನಿಷೇಧ ವಿಧಿಸಿದೆ ಮತ್ತು ದೇಶದಲ್ಲಿ ಈ ಜಾತಿಯ ಮರಗಳ ರಕ್ಷಿಸಲು ಸಂರಕ್ಷಣಾ ಕ್ರಮಗಳನ್ನು ಸ್ಥಾಪಿಸಿದೆ.

SCROLL FOR NEXT