ದೆಹಲಿ ಸಿಎಂ ಕೇಜ್ರಿವಾಲ್ 
ದೇಶ

ನಾನು ದೇಶದ ಅತಿದೊಡ್ಡ ವಂಚಕನಾಗಿದ್ದರೆ, ನನ್ನಿಂದ 50 ಕೋಟಿ ರೂ. ಏಕೆ ಸ್ವೀಕರಿಸಿದಿರಿ?; ಕೇಜ್ರಿವಾಲ್‌ಗೆ ಸುಕೇಶ್ ಚಂದ್ರಶೇಖರ್

ಹಣ ಅಕ್ರಮ ವರ್ಗಾವಣೆ ಮತ್ತು ಹಲವರಿಗೆ ವಂಚಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಸುಕೇಶ್ ಚಂದ್ರಶೇಖರ್, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

ನವದೆಹಲಿ: ಹಣ ಅಕ್ರಮ ವರ್ಗಾವಣೆ ಮತ್ತು ಹಲವರಿಗೆ ವಂಚಿಸಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಸುಕೇಶ್ ಚಂದ್ರಶೇಖರ್, ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

‘ನಾನು ದೇಶದ ಅತಿ ದೊಡ್ಡ ವಂಚಕನಾಗಿದ್ದರೆ, ಯಾವ ಆಧಾರದಲ್ಲಿ ನನ್ನಿಂದ 50 ಕೋಟಿ ರೂಪಾಯಿ ಸ್ವೀಕರಿಸಿದಿರಿ ಮತ್ತು ರಾಜ್ಯಸಭಾ ಸ್ಥಾನದ ಪ್ರಸ್ತಾವವನ್ನು ನೀಡಿದ್ದೀರಿ’ ಎಂದು ಕೇಜ್ರಿವಾಲ್‍‌ರನ್ನು ಶುಕ್ರವಾರ ಬಿಡುಗಡೆ ಮಾಡಿದ ಬಹಿರಂಗ ಪತ್ರದಲ್ಲಿ ಪ್ರಶ್ನಿಸಿದ್ದಾರೆ.

ಅರವಿಂದ ಕೇಜ್ರಿವಾಲ್, ಎಎಪಿ ನಾಯಕರಾದ ಕೈಲಾಶ್ ಗೆಹ್ಲೋಟ್ ಮತ್ತು ಸತ್ಯೇಂದ್ರ ಜೈನ್ ವಿರುದ್ಧ ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಹೊಸ ದೂರು ಸಲ್ಲಿಸಿದ್ದೇನೆ ಎಂದಿರುವ ಸುಕೇಶ್, ಇದೇ ವೇಳೆ ಅವರು ತಮ್ಮ ಪತ್ರದ ಮೂಲಕ ಕೇಜ್ರಿವಾಲ್‌ಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

2016 ರಲ್ಲಿ ಕೇಜ್ರಿವಾಲ್ ಅವರು, 'ಎಎಪಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸ್ಥಾನಗಳು ಮತ್ತು ಪೋಸ್ಟಿಂಗ್‌ಗಳಿಗೆ ಪ್ರತಿಯಾಗಿ ಪಕ್ಷಕ್ಕೆ 500 ಕೋಟಿ ರೂಪಾಯಿಗಳನ್ನು ನೀಡಲು 20 ರಿಂದ 30 ವ್ಯಕ್ತಿಗಳನ್ನು ಕರೆತರಲು ನೀವು ನನ್ನನ್ನು ಏಕೆ ಒತ್ತಾಯಿಸಿದ್ದೀರಿ?' ಎಂದು ಪ್ರಶ್ನಿಸಿರುವ ಅವರು, ಸದ್ಯ ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರೊಂದಿಗೆ 2016ರಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಔತಣಕೂಟದಲ್ಲಿ ಕೇಜ್ರಿವಾಲ್ ಕೂಡ ಭಾಗವಹಿಸಿದ್ದರು ಎಂದು ಸುಕೇಶ್ ಆರೋಪಿಸಿದ್ದಾರೆ.

ನಿಮ್ಮ ಸೂಚನೆಯ ಮೇರೆಗೆ ನಾನು ಅಸೋಲಾದಲ್ಲಿರುವ ಗೆಹ್ಲೋಟ್ ಅವರ ಫಾರ್ಮ್ ಹೌಸ್‌ನಲ್ಲಿ 50 ಕೋಟಿ ರೂ.ಗಳನ್ನು ಸತ್ಯೇಂದ್ರ ಜೈನ್‌ ಅವರಿಗೆ ತಲುಪಿಸಿದ ನಂತರ ನಾನು ತಂಗಿದ್ದ ಭಿಕಾಜಿ ಕಾಮಾ ಪ್ಲೇಸ್‌ನ ಹಯಾತ್‌ನಲ್ಲಿ 2016 ರಲ್ಲಿ ಜೈನ್ ಅವರೊಂದಿಗೆ ನನ್ನ ಡಿನ್ನರ್ ಪಾರ್ಟಿಯಲ್ಲಿ ಏಕೆ ಭಾಗವಹಿಸಿದ್ದೀರಿ?' ಎಂದು ಪ್ರಶ್ನಿಸಿದ್ದಾರೆ.

'ಕೇಜ್ರಿವಾಲ್ ಜೀ, ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಸೂಪರ್ ಕಾಪ್ ಆಗಿ ಸೇವೆ ಸಲ್ಲಿಸಿದ ನಂತರ ಎಎಪಿಗೆ ಸೇರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ನನ್ನನ್ನು ಏಕೆ ಒತ್ತಾಯಿಸಿದಿರಿ ಮತ್ತು ಅದನ್ನು ನೋಡಿಕೊಳ್ಳುವಂತೆ ಹೇಳಿದಿರಿ? ಎಂದೂ ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್ ಜೀ, 2017 ರಲ್ಲಿ ಜೈನ್ ಅವರು ತಿಹಾರ್ ಜೈಲಿನಲ್ಲಿ ನನ್ನನ್ನು ಭೇಟಿ ಮಾಡಲು ಬಂದಾಗ ಅವರ ಫೋನಿನಲ್ಲಿ ನೀವು ನನ್ನೊಂದಿಗೆ ಏಕೆ ಮಾತನಾಡಿದಿರಿ? ಕಪ್ಪು ಐಫೋನ್‌ನಲ್ಲಿ ಕರೆ ಮಾಡಿದ ಹೆಸರನ್ನು ಎಕೆ-2 ಎಂದು ಸೇವ್ ಮಾಡಲಾಗಿದೆ' ಎಂದು ಸುಕೇಶ್ ಹೇಳಿದರು.

'ಕೇಜ್ರಿವಾಲ್ ಜೀ, ತಮಿಳುನಾಡಿನ ಕೆಲವು ಶಾಸಕರು ಮತ್ತು ನಟರನ್ನು ಎಎಪಿಗೆ ಸೇರಿಸುವಂತೆ ನನ್ನನ್ನು ಕೇಳಲು ಜೈನ್‌ ಅವರಿಗೆ ಏಕೆ ಹೇಳುತ್ತಿದ್ದಿರಿ? 2016 ಮತ್ತು 2017ರಲ್ಲಿ ನನ್ನ ಮೇಲೆ ಏಕೆ ನಿರಂತರ ಒತ್ತಡ ಹೇರಲಾಯಿತು? ಜೈಲಿನಲ್ಲಿ ರಕ್ಷಣೆಗಾಗಿ ಜೈನ್ ಅವರಿಗೆ ಇನ್ನೂ 10 ಕೋಟಿ ರೂ. ಹಣ ನೀಡಿದಾಗ ನೀವು ಹೇಗೆ 'ಸರಿ'ಯಾಗಿದ್ದಿರಿ?' ಎಂದು ಅವರು ಕೇಳಿದರು.

'ಹೀಗಾಗಿ, ಕೇಜ್ರಿವಾಲ್ ಜೀ, ನನ್ನ ಕಡೆಗೆ ಬೆರಳು ತೋರಿಸಿ ಸಮಸ್ಯೆಯನ್ನು ರಾಜಕೀಯ ಮಾಡಲು ಮತ್ತು ಜನರ ಮನಸ್ಸಿನಲ್ಲಿ ವಿಷಯವನ್ನು ತಿರುಚಲು ಪ್ರಯತ್ನಿಸುವ ಮುನ್ನ, ಈಗ ನೀವು ಕಾನೂನಿಗೆ ಉತ್ತರಿಸುವ ಸಮಯ ಬಂದಿದೆ. ಏಕೆಂದರೆ, ನಾನು ಮತ್ತು ನಿಮ್ಮ ನಡುವಿನ ಹಾಗೂ ನಾನು ಮತ್ತು ನಿಮ್ಮ ಇತರ ಸಹವರ್ತಿಗಳ ನಡುವೆ ನಡೆದ ಪ್ರತಿಯೊಂದು ವ್ಯವಹಾರ ಮತ್ತು ಸಂಭಾಷಣೆಯ ಪುರಾವೆಗಳನ್ನು ಸಲ್ಲಿಸುತ್ತೇನೆ. ಇದರಿಂದ ನಾನು ಹಿಂದೆ ಸರಿಯುತ್ತೇನೆ ಎಂದು ನಾನು ಭಾವಿಸುವುದಿಲ್ಲ' ಎಂದು ಸುಕೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

SCROLL FOR NEXT