ದಾವೂದ್ ಇಬ್ರಾಹಿಂ(ಸಂಗ್ರಹ ಚಿತ್ರ) 
ದೇಶ

ಭಾರತದಲ್ಲಿ ಭಯೋತ್ಪಾದನೆ ಕುಕೃತ್ಯಗಳಿಗೆ ದಾವೂದ್ ಇಬ್ರಾಹಿಂನಿಂದ ಹವಾಲಾ ಮೂಲಕ ಭಾರೀ ಮೊತ್ತದ ಹಣ ರವಾನೆ: ಎನ್ಐಎ

ಭಾರತದಲ್ಲಿನ 'ಡಿ-ಕಂಪನಿ'ಯ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಹವಾಲಾ ಮಾರ್ಗಗಳ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಭಾರೀ ಮೊತ್ತದ ಹಣವನ್ನು ಕಳುಹಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆರೋಪಿಸಿದೆ.

ನವದೆಹಲಿ: ಭಾರತದಲ್ಲಿನ 'ಡಿ-ಕಂಪನಿ'ಯ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವು ನೀಡಿದ ಪ್ರಕರಣದಲ್ಲಿ ಬಂಧಿತ ಆರೋಪಿಗಳಿಗೆ ಹವಾಲಾ ಮಾರ್ಗಗಳ ಮೂಲಕ ಭೂಗತ ಪಾತಕಿ ದಾವೂದ್ ಇಬ್ರಾಹಿಂ(Dawood Ibrahim) ಭಾರೀ ಮೊತ್ತದ ಹಣವನ್ನು ಕಳುಹಿಸಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಆರೋಪಿಸಿದೆ.

ಜನರಲ್ಲಿ ಭಯವನ್ನುಂಟುಮಾಡಲು ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವುದಕ್ಕೆ ಈ ಹಣ ಪೂರೈಕೆಯಾಗಿದೆ. ಡಿ-ಕಂಪನಿಯು ರಾಜಕೀಯ ನಾಯಕರು ಮತ್ತು ಉದ್ಯಮಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳ ಮೇಲೆ ದಾಳಿ ಮಾಡುವ ಮೂಲಕ ಭಾರತದ ಜನರಲ್ಲಿ ಭಯೋತ್ಪಾದನೆ ಭಯ ಮೂಡಿಸಲು ವಿಶೇಷ ಘಟಕವನ್ನು ಸ್ಥಾಪಿಸಿದೆ ಎಂದು ತನಿಖಾ ಸಂಸ್ಥೆ ಹೇಳಿಕೊಂಡಿದೆ.

ಜಾಗತಿಕ ಭಯೋತ್ಪಾದಕ ಜಾಲ, ಭಯೋತ್ಪಾದಕ ಮತ್ತು ವಿವಿಧ ಕೃತ್ಯಗಳಲ್ಲಿ ಭಾಗಿಯಾಗಿರುವ ಡಿ-ಕಂಪನಿ ಎಂಬ ಅಂತಾರಾಷ್ಟ್ರೀಯ ಸಂಘಟಿತ ಕ್ರಿಮಿನಲ್ ಸಂಘಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮುಂಬೈನ ವಿಶೇಷ ನ್ಯಾಯಾಲಯದ ಮುಂದೆ ಕಳೆದ ವಾರ ಸಲ್ಲಿಸಲಾದ ಚಾರ್ಜ್‌ಶೀಟ್‌ನಲ್ಲಿ ಎನ್‌ಐಎ ಈ ಆರೋಪಗಳನ್ನು ಮಾಡಿದೆ. 

ಡಿ-ಕಂಪನಿಯು ಭೂಗತ ಪಾತಕಿ ಮತ್ತು ಭಾರತದಲ್ಲಿ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾದ ದಾವೂದ್ ಇಬ್ರಾಹಿಂನ ಜಾಲವನ್ನು ಉಲ್ಲೇಖಿಸುತ್ತದೆ. ಎನ್ಐಎ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಇಬ್ರಾಹಿಂ ಮತ್ತು ಆತನ ಆಪ್ತ ಛೋಟಾ ಶಕೀಲ್ ಅವರನ್ನು ವಾಂಟೆಡ್ ಆರೋಪಿಗಳೆಂದು ತೋರಿಸಲಾಗಿದೆ, ಇದರಲ್ಲಿ ಎನ್‌ಐಎ ಐದು ಆರೋಪಿಗಳನ್ನು ಹೆಸರಿಸಿದೆ.

ಚಾರ್ಜ್ ಶೀಟ್ ನಲ್ಲಿ ಆರೋಪ ಮಾಡಿರುವ ಇತರ ಮೂವರು ಆರೋಪಿಗಳೆಂದರೆ ಆರಿಫ್ ಅಬೂಬಕರ್ ಶೇಖ್, ಶಬ್ಬೀರ್ ಅಬೂಬಕರ್ ಶೇಖ್ ಮತ್ತು ಮೊಹಮ್ಮದ್ ಸಲೀಂ ಖುರೇಷಿ - ಎಲ್ಲರೂ ಮುಂಬೈ ನಿವಾಸಿಗಳು ಮತ್ತು ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.

ಬಂಧಿತ ಮತ್ತು ಬೇಕಾಗಿರುವ ಆರೋಪಿಗಳು ಭಯೋತ್ಪಾದಕ ಗ್ಯಾಂಗ್‌ನಂತೆ ಕೆಲಸ ಮಾಡುವ ಸಂಘಟಿತ ಅಪರಾಧ ಸಿಂಡಿಕೇಟ್‌ನ "ಸಕ್ರಿಯ ಸದಸ್ಯರು" ಎಂದು ತನಿಖೆಯ ಸಮಯದಲ್ಲಿ ಸಂಗ್ರಹಿಸಲಾದ ಪುರಾವೆಗಳು ಬಹಿರಂಗಪಡಿಸಿವೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೊಂಡಿದೆ.

ಬಂಧಿತ ಆರೋಪಿಗಳು ಹಣವನ್ನು ಸುಲಿಗೆ ಮಾಡುವ ಮೂಲಕ ಭಯೋತ್ಪಾದಕ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸುವ ಮೂಲಕ ಡಿ-ಕಂಪನಿಯ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸುವ ಹಲವಾರು ನಿದರ್ಶನಗಳಿವೆ ಎಂದು NIA ಹೇಳಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT