ದೇಶ

ಇಂತಹ ರಾಜಕೀಯ ದ್ವೇಷವನ್ನು ನಾವೆಂದೂ ನೋಡಿರಲಿಲ್ಲ: ಸಂಜಯ್ ರಾವತ್

Nagaraja AB

ಮುಂಬೈ:  ಭೂಹಗರಣದಿಂದ ಜೈಲು ಸೇರಿದ್ದ ಶಿವಸೇನಾ ಮುಖಂಡ ಸಂಜಯ್ ರಾವತ್ ನಿನ್ನೆ ಜೈಲಿನಿಂದ ಹೊರಗೆ ಬಂದಿದ್ದಾರೆ. ಇಂದು ಬೆಳಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ರಾಜಕೀಯ ದ್ವೇಷವನ್ನು ನಾವೆಂದೂ ನೋಡಿರಲಿಲ್ಲ ಎಂದರು.

ಇಂದು ಉದ್ಧವ್ ಠಾಕ್ರೆ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗುತ್ತೇನೆ. ಯಾರ ಮೇಲೆ ಯಾವುದೇ ದೂರು ಇಲ್ಲ. ಆದರೆ, ಇಂತಹ ರಾಜಕೀಯ ದ್ವೇಷವನ್ನು ನಾವೆಂದೂ ನೋಡಿರಲಿಲ್ಲ. ಯಾವುದೇ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ದೂಷಿಸುವುದಿಲ್ಲ ಎಂದು ಅವರು ಹೇಳಿದರು. 

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಅವರ ಕೆಲವೊಂದು ಒಳ್ಳೆಯ ನಿರ್ಧಾರಗಳನ್ನು ಸ್ವಾಗತಿಸುತ್ತೇನೆ. ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕೆಲವೊಂದು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರಿಂದಲೇ ರಾಜ್ಯದಲ್ಲಿ ಸರ್ಕಾರ ನಡೆಯುತ್ತಿದೆ ಅಂತಾ ಅನ್ನಿಸುತ್ತಿದೆ. ಫಡ್ನವೀಸ್ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಎಂದರು. 

ಪತ್ರಾ ಚಾಲ್ ಮರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೇ ಆಗಸ್ಟ್ 1 ರಂದು ಇಡಿಯಿಂದ ಬಂಧನಕ್ಕೊಳಗಾಗಿ ಅರ್ಥರ್ ಜೈಲಿನಲ್ಲಿದ್ದ ಸಂಜಯ್ ರಾವತ್ ಅವರಿಗೆ ಮುಂಬೈ ವಿಶೇಷ ನ್ಯಾಯಾಲಯ ಬುಧವಾರ ಸಂಜೆ ಜಾಮೀನು ನೀಡಿದ ನಂತರ ಅವರು ಜೈಲಿನಿಂದ ಹೊರಗೆ ಬಂದರು. 

SCROLL FOR NEXT