ದೇಶ

ಹಿಮಾಚಲ ಪ್ರದೇಶ ಚುನಾವಣೆ ಮತದಾನ ಮಂದಗತಿಯಲ್ಲಿ ಆರಂಭ: ಬೆಳಗ್ಗೆ 9 ಗಂಟೆಯವರೆಗೆ ಶೇ.5.02 ಮತದಾನ

Sumana Upadhyaya

ಶಿಮ್ಲಾ: ವಿದ್ಯುನ್ಮಾನ ಮತಯಂತ್ರಗಳು(EVM) ಪರಿಶೀಲಿಸಲು ಅಧಿಕಾರಿಗಳು ಎಲ್ಲಾ ಮತಗಟ್ಟೆಗಳಲ್ಲಿ ಅಣಕು ಮತದಾನ ನಡೆಸಿದ ನಂತರ ನಿರ್ಣಾಯಕ ಹಿಮಾಚಲ ಪ್ರದೇಶ ಚುನಾವಣೆಯ ಮತದಾನ ಶನಿವಾರ ಬೆಳಗ್ಗೆ 8 ಗಂಟೆಗೆ ನಿಧಾನಗತಿಯಲ್ಲಿ ಪ್ರಾರಂಭವಾಯಿತು.

ಮತದಾನದ ಮೊದಲ ಗಂಟೆಯಲ್ಲಿ ಕೇವಲ ಶೇ.4ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. 55 ಲಕ್ಷಕ್ಕೂ ಹೆಚ್ಚು ಮತದಾರರು 68 ವಿಧಾನಸಭಾ ಕ್ಷೇತ್ರಗಳಲ್ಲಿ 412 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಈ ಬಾರಿ 24 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ರಾಜ್ಯದಲ್ಲಿ ಒಟ್ಟು ಮತದಾರರಲ್ಲಿ 28,54,945 ಪುರುಷ ಹಾಗೂ 27,37,845 ಮಹಿಳಾ ಮತದಾರರಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಮನೀಶ್ ಗರ್ಗ್, ಮತದಾನಕ್ಕೆ ಎಲ್ಲಾ ವ್ಯವಸ್ಥೆಗಳು ಜಾರಿಯಲ್ಲಿವೆ. ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಸುಮಾರು 50,000 ಮತಗಟ್ಟೆ ಸಿಬ್ಬಂದಿ ಮತ್ತು ಸುಮಾರು 25,000 ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದರು. 

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು "ಪ್ರಜಾಪ್ರಭುತ್ವದ ಹಬ್ಬ" ದಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಕರೆ ನೀಡಿದರು.ಪ್ರತಿ ಮತವು ಸಮೃದ್ಧ ಹಿಮಾಚಲ ಪ್ರದೇಶವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಮಂಡಿಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಸಿಎಂ ಜೈರಾಮ್ ಠಾಕೂರ್ 

ಮೊದಲ ಮತದಾನ, ನಂತರ ಉಪಹಾರಗಳು. ಆತ್ಮೀಯ ಸಹ ರಾಜ್ಯದ ನಿವಾಸಿಗಳೇ, ಇಂದು ಮತದಾನದ ದಿನ. ಹಿಮಾಚಲ ಪ್ರದೇಶದ ಎಲ್ಲಾ ಮತದಾರರು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪೂರ್ಣ ಉತ್ಸಾಹದಿಂದ ಭಾಗವಹಿಸಬೇಕೆಂಬುದು ನನ್ನ ವಿನಮ್ರ ವಿನಂತಿ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿ, ನಿಮ್ಮ ಒಂದು ಮತವು ಸಮೃದ್ಧ ಹಿಮಾಚಲವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ ಮತದಾನವನ್ನು ನಿಗದಿಪಡಿಸಲಾಗಿದೆ. ಚುನಾವಣಾ ಆಯೋಗವು ದೂರದ ಪ್ರದೇಶಗಳಲ್ಲಿ ಮೂರು ಸಹಾಯಕ ಮತದಾನ ಕೇಂದ್ರಗಳು ಸೇರಿದಂತೆ 7,884 ಮತಗಟ್ಟೆಗಳನ್ನು ಹೊಂದಿದೆ. ಇವುಗಳಲ್ಲಿ 789 ದುರ್ಬಲ ಬೂತ್‌ಗಳು ಮತ್ತು 397 ನಿರ್ಣಾಯಕವಾಗಿವೆ. 

EC ತನ್ನ ಅತ್ಯುನ್ನತ ಬೂತ್ ನ್ನು ತಾಶಿಗಂಗ್, ಕಾಜಾದಲ್ಲಿ ಲಾಹೌಲ್ ಸ್ಪಿತಿ ಜಿಲ್ಲೆಯ ಸ್ಪಿಟಿ ಪ್ರದೇಶದಲ್ಲಿ 15,256 ಅಡಿ ಎತ್ತರದಲ್ಲಿ ಸ್ಥಾಪಿಸಿದ್ದು ಅದು 52 ಮತದಾರರಿಗೆ ಅನುಕೂಲವಾಗಲಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಶೇ.75.57 ಮತದಾನವಾಗಿತ್ತು.

SCROLL FOR NEXT