ಬಿಜೆಪಿ ಲೋಗೋ 
ದೇಶ

ಅಬಕಾರಿ ನೀತಿ ಹಗರಣ: ಮಂಪರು ಪರೀಕ್ಷೆಗೆ ಒಳಗಾಗಿ ಆರೋಪ ಸುಳ್ಳೆಂದು ಸಾಬೀತುಪಡಿಸಿ; ಕೇಜ್ರಿವಾಲ್‌ಗೆ ಬಿಜೆಪಿ ಸವಾಲು

ದೆಹಲಿ ಅಬಕಾರಿ ನೀತಿ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಭಾನುವಾರ ಹೊಸ ವಾಗ್ದಾಳಿ ನಡೆಸಿದ್ದು, ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಅವರು ಕೇಳಿರುವಂತೆ ಮಂಪರು ಪರೀಕ್ಷೆಗೆ ಒಳಗಾಗುವ ಮೂಲಕ ತಮ್ಮ 'ಪ್ರಾಮಾಣಿಕತೆಯನ್ನು' ಸಾಬೀತುಪಡಿಸುವಂತೆ ಕೇಳಿದೆ.

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ವಿಚಾರದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಭಾನುವಾರ ಹೊಸ ವಾಗ್ದಾಳಿ ನಡೆಸಿದ್ದು, ಜೈಲು ಪಾಲಾಗಿರುವ ಸುಕೇಶ್ ಚಂದ್ರಶೇಖರ್ ಅವರು ಕೇಳಿರುವಂತೆ ಮಂಪರು ಪರೀಕ್ಷೆಗೆ ಒಳಗಾಗುವ ಮೂಲಕ ತಮ್ಮ 'ಪ್ರಾಮಾಣಿಕತೆಯನ್ನು' ಸಾಬೀತುಪಡಿಸುವಂತೆ ಕೇಳಿದೆ.

ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ನಿರ್ದೇಶನದ 'ಲೂಟೆರಾ' ಚಿತ್ರ ಕಳೆದ ಎಂಟು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿದೆ ಎಂದು 2013ರ ರಣವೀರ್ ಸಿಂಗ್ ಅಭಿನಯದ 'ಲೂಟೆರಾ' ಚಿತ್ರವನ್ನು ಉಲ್ಲೇಖಿಸಿ ಹೇಳಿದರು.

ಪಕ್ಷವು ಟ್ವಿಟರ್‌ನಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದು, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು 'ಲೂಟೆರಾ' ಎಂದು ತೋರಿಸಿದೆ.

ಸುಕೇಶ್ ಚಂದ್ರಶೇಖರ್ ಅವರು ಕೇಸರಿ ಪಕ್ಷದ ಭಾಷೆಯಲ್ಲೇ ಮಾತನಾಡುತ್ತಿರುವುದರಿಂದ ಅವರನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಅರವಿಂದ ಕೇಜ್ರಿವಾಲ್ ಹೇಳಿದ ಒಂದು ದಿನದ ನಂತರ ಪೂನಾವಾಲಾ ಅವರ ಈ ಹೇಳಿಕೆ ಹೊರಬಿದ್ದಿದೆ.

'ಕೇಜ್ರಿವಾಲ್ ಅವರು ತಮ್ಮ ಸಚಿವರಾದ ಸತ್ಯೇಂದ್ರ ಜೈನ್ ಮತ್ತು ಕೈಲಾಶ್ ಗಹ್ಲೋಟ್ ಅವರೊಂದಿಗೆ ನೇರ ಪ್ರಸಾರದಲ್ಲಿ ಮಂಪರು ಪರೀಕ್ಷೆಗೆ ಒಳಗಾಗಲು ಮತ್ತು ಸುಕೇಶ್ ಚಂದ್ರಶೇಖರ್ ಅವರ ಹೇಳಿಕೆಗಳನ್ನು ತಪ್ಪು ಎಂದು ಸಾಬೀತುಪಡಿಸಲು ಇದು ಉತ್ತಮ ಅವಕಾಶ' ಎಂದು ಅವರು ಹೇಳಿದರು.

ಸುಕೇಶ್ ಚಂದ್ರಶೇಖರ್ ಅವರು ಎಲ್‌ಜಿಗೆ ಪತ್ರಗಳನ್ನು ಬರೆದಿದ್ದು, ಎಎಪಿ ನಾಯಕರ ವಿರುದ್ಧ ವಿವಿಧ ಸುಲಿಗೆ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ, ಕೇಜ್ರಿವಾಲ್ ಮತ್ತು ಅವರ ಇತರ ಸಚಿವರೊಂದಿಗೆ ತಾನೂ ಕೂಡ ಮಂಪರು ಪರೀಕ್ಷೆಗೆ ಸಿದ್ಧ ಎಂದು ಹೇಳಿದ್ದಾರೆ.

ಮಂಪರು ಪರೀಕ್ಷೆ ಮೂಲಕ ಕೇಜ್ರಿವಾಲ್ ತಮ್ಮ ಪ್ರಾಮಾಣಿಕತೆಯನ್ನು ಸಾಬೀತುಪಡಿಸಬಹುದು. ಆದರೆ, ಅವರು ಅದನ್ನು ಮಾಡುವುದಿಲ್ಲ. ಮದ್ಯ ಹಗರಣದಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಸಂಪರ್ಕಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ' ಎಂದು ಅವರು ಹೇಳಿದರು.

ಕೇಜ್ರಿವಾಲ್ ನಿರ್ದೇಶನದ ಲೂಟೆರಾ ಚಿತ್ರದ ಪಾತ್ರವರ್ಗದಲ್ಲಿ ಮದ್ಯದ ಹಗರಣದ ಆರೋಪಿ ಮನೀಶ್ ಸಿಸೋಡಿಯಾ ಇದ್ದಾರೆ ಮತ್ತು ಕೇಜ್ರಿವಾಲ್ ಸರ್ಕಾರದ ಈಗ ರದ್ದುಪಡಿಸಿದ ಅಬಕಾರಿ ನೀತಿ 2021-22 ರಾಜ್ಯದ ಬೊಕ್ಕಸಕ್ಕೆ 1800 ಕೋಟಿ ರೂಪಾಯಿ ನಷ್ಟವನ್ನು ಉಂಟುಮಾಡಿದೆ ಎಂದು ಆರೋಪಿಸಿದರು.
ಈಗಾಗಲೇ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT