ದೇಶ

ಚೆನ್ನೈ: ವೈದ್ಯಕೀಯ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡಿದ್ದ 17 ವರ್ಷದ ಫುಟ್ಬಾಲ್ ಆಟಗಾರ್ತಿ ಸಾವು

Ramyashree GN

ಚೆನ್ನೈ: ಬಾಚ್ಡ್ (Botched surgery) ಶಸ್ತ್ರಚಿಕಿತ್ಸೆಯಿಂದ ಬಲಗಾಲನ್ನು ಕಳೆದುಕೊಂಡಿದ್ದ 17 ವರ್ಷದ ಫುಟ್ಬಾಲ್ ಆಟಗಾರ್ತಿ ಇಂದು ಬೆಳಗ್ಗೆ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬಾಚ್ಡ್ ಶಸ್ತ್ರಚಿಕಿತ್ಸೆ ಎಂದರೆ, ನಿರೀಕ್ಷಿಸಿದ್ದಕ್ಕಿಂತ ಫಲಿತಾಂಶ ಕೆಟ್ಟದಾಗಿದ್ದರೆ ಪ್ಲಾಸ್ಟಿಕ್ ಸರ್ಜರಿಯನ್ನು ಸಾಮಾನ್ಯವಾಗಿ 'ಬೋಚ್ಡ್' ಎಂದು ಕರೆಯಲಾಗುತ್ತದೆ. ಅಂದರೆ, ವೈದ್ಯರು ನಿರೀಕ್ಷಿಸಲು ಹೇಳಿದ ಫಲಿತಾಂಶಕ್ಕಿಂತ ಗಣನೀಯವಾಗಿ ಭಿನ್ನ ಫಲಿತಾಂಶವಾಗಿರುತ್ತದೆ. ರೋಗಿಯು ಶಸ್ತ್ರಚಿಕಿತ್ಸೆಯಿಂದ ಉಂಟಾದ ವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದರೆ, ಅದನ್ನು ಹೆಚ್ಚಾಗಿ ಬಾಚ್ಡ್ ಎಂದು ಕರೆಯಲಾಗುತ್ತದೆ.

ಮೂಲಗಳ ಪ್ರಕಾರ, ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದ ಪ್ರಿಯಾ ಮೂತ್ರಪಿಂಡ ಮತ್ತು ಹೃದಯದ ತೊಂದರೆಗಳನ್ನು ಎದುರಿಸುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಇಂದು ಬೆಳಿಗ್ಗೆ 7.15ಕ್ಕೆ ಸಾವಿಗೀಡಾಗಿದ್ದಾರೆ.

ಪ್ರಿಯಾ ಅವರ ಮೊಣಕಾಲಿನ ಮೂಳೆಕಟ್ಟು (ಅಸ್ಥಿರಜ್ಜು) ಹರಿದಿದ್ದು, ಇತ್ತೀಚೆಗೆ ಪೆರಿಯಾರ್ ನಗರದ ಸರ್ಕಾರಿ ಪೆರಿಫೆರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ಮಾಡಿದರು. ಶಸ್ತ್ರಚಿಕಿತ್ಸೆಯ ನಂತರ ಪ್ರಿಯಾಳ ಕಾಲು ಊದಿಕೊಂಡಿತ್ತು ಮತ್ತು ಆಕೆಗೆ ಇತರ ಸಮಸ್ಯೆಗಳು ಎದುರಾಗಿದ್ದವು. ಬಳಿಕ ಆಕೆಯನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಎಂದು ಪ್ರಿಯಾಳ ಸಹೋದರ ಆರ್. ವಿಜಯ್ ತಿಳಿಸಿದ್ದಾರೆ.

ಇಬ್ಬರು ವೈದ್ಯರಲ್ಲಿ ಒಬ್ಬರು ಹಿರಿಯರು ಮತ್ತು ಇನ್ನೊಬ್ಬರು ಸಹಾಯಕ ಪ್ರಾಧ್ಯಾಪಕರು ಎಂದು ವೈದ್ಯಕೀಯ ಶಿಕ್ಷಣ ನಿರ್ದೇಶಕ (ಪೂರ್ಣ ಹೆಚ್ಚುವರಿ ಪ್ರಭಾರ) ಡಾ.ಆರ್. ಶಾಂತಿಮಲಾರ್ ತಿಳಿಸಿದ್ದಾರೆ.
ಪ್ರಿಯಾ ನಿಧನದ ನಂತರ ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಬಾಲಕಿಯ ಕುಟುಂಬವನ್ನು ಭೇಟಿ ಮಾಡಿದರು.

'ಇದು ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವಾಗಿದೆ. ಶಸ್ತ್ರಚಿಕಿತ್ಸೆಯ ನಂತರ, ಕಂಪ್ರೆಷನ್ ಬ್ಯಾಂಡ್ ವಿಪರೀತವಾಗಿ ಬಿಗಿಗೊಳಿಸಲಾಗಿದೆ. ಇದು ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರಿದೆ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಬ್ಬರು ವೈದ್ಯರನ್ನು ಅಮಾನತುಗೊಳಿಸಿ, ಇಲಾಖಾ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ದೂರು ಕೂಡ ದಾಖಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೃತ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗುವುದು ಮತ್ತು ಅವರ ಮೂವರು ಸಹೋದರರಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದು ಅವರು ಹೇಳಿದರು.

SCROLL FOR NEXT