ದೇಶ

ಮಿಜೋರಾಂ: ಕಲ್ಲು ಕ್ವಾರಿ ಕುಸಿದು ಬಿಹಾರ ಮೂಲದ 8 ಕಾರ್ಮಿಕರು ಸಾವು; ನಾಲ್ವರಿಗಾಗಿ ತೀವ್ರ ಶೋಧ

Shilpa D

ಗುವಾಹಟಿ: ಮಿಜೋರಾಂನಲ್ಲಿ ಸೋಮವಾರ ಕಲ್ಲು ಕ್ವಾರಿ ಕುಸಿದು ಬಿದ್ದು ಸಿಕ್ಕಿಬಿದ್ದಿದ್ದ ಎಂಟು ಬಿಹಾರ ಕಾರ್ಮಿಕರ ಶವಗಳನ್ನು ಮಂಗಳವಾರ ಹೊರತೆಗೆಯಲಾಯಿತು. ಇನ್ನೂ ನಾಲ್ವರು ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ

ಮರಣೋತ್ತರ ಪರೀಕ್ಷೆ ನಂತರ ಮೃತದೇಹಗಳ ಗುರುತು ಪತ್ತೆ ಹಚ್ಚಲಾಗುವುದು. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಕಾಣೆಯಾದವರೆಲ್ಲ ಪತ್ತೆಯಾಗುವವರೆಗೂ ಮುಂದುವರೆಯಲಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಹೇಳಿಕೆಯಲ್ಲಿ ತಿಳಿಸಿದೆ.

ಮೂಲಗಳ ಪ್ರಕಾರ, ನಾಥಿಯಾಲ್ ಜಿಲ್ಲೆಯ ಮೌದರ್ಹ್‌ನಲ್ಲಿರುವ ಖಾಸಗಿ ಕಂಪನಿಯ ಕಾರ್ಮಿಕರು ಕೆಲಸದ ನಡುವೆ ತಮ್ಮ ಊಟದ ವಿರಾಮದಿಂದ ಬಳಿಕ ಮತ್ತೆ ಕೆಲಸಕ್ಕೆ ಮರಳಿದ್ದರು. ಆಗ ಕಲ್ಲು ಕ್ವಾರಿ ಕುಸಿದಿದೆ. ಕಾರ್ಮಿಕರ ಜೊತೆಗೆ ಐದು ಹಿಟಾಚಿ ಮತ್ತು ಇತರ ಡ್ರಿಲ್ಲಿಂಗ್ ಯಂತ್ರಗಳು ಹೂತು ಹೋಗಿವೆ ಎಂದು ಮೂಲಗಳು ತಿಳಿಸಿವೆ.

ಲೀಟ್ ಗ್ರಾಮ ಮತ್ತು ನಾಥಿಯಾಲ್ ಪಟ್ಟಣದ ಸ್ವಯಂಸೇವಕರು ತಕ್ಷಣ ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳಕ್ಕೆ ತಲುಪಿ, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ, ಗಡಿ ಭದ್ರತಾ ಪಡೆ ಮತ್ತು ಅಸ್ಸಾಂ ರೈಫಲ್ಸ್ ತಂಡ ಸಹ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದೆ.

SCROLL FOR NEXT