ದೇಶ

ಮಿಜೋರಾಂ ಕಲ್ಲು ಕ್ವಾರಿ ಕುಸಿತ: ಮೃತರ ಸಂಖ್ಯೆ 10ಕ್ಕೆ ಏರಿಕೆ, ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಪ್ರಧಾನಿ

Ramyashree GN

ಐಜ್ವಾಲ್: ಮಿಜೋರಾಂನ ಕಲ್ಲು ಕ್ವಾರಿ ಕುಸಿತದಲ್ಲಿ ಮೃತಪಟ್ಟ ಪ್ರತಿಯೊಬ್ಬರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50,000 ರೂಪಾಯಿ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಘೋಷಿಸಿದ್ದಾರೆ.

ದಕ್ಷಿಣ ಮಿಜೋರಾಂನ ನಾಥಿಯಾಲ್ ಜಿಲ್ಲೆಯ ಕಲ್ಲು ಕ್ವಾರಿ ಕುಸಿತ ಘಟನೆಯಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಸ್ಥಳದಿಂದ ಇನ್ನೆರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಿಜೋರಾಂನ ಕಲ್ಲು ಕ್ವಾರಿ ಕುಸಿತದ ದುರಂತದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ಬಗ್ಗೆ ನನ್ನ ಸಂತಾಪಗಳು. ಪಿಎಂಎನ್‌ಆರ್‌ಎಫ್‌ನಿಂದ ಪ್ರತಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ತಲಾ 50,000 ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಮೃತಪಟ್ಟವರಲ್ಲಿ ಐವರು ಪಶ್ಚಿಮ ಬಂಗಾಳದವರು, ಜಾರ್ಖಂಡ್ ಮತ್ತು ನೆರೆಯ ಅಸ್ಸಾಂನ ಇಬ್ಬರು ಹಾಗೂ ಒಬ್ಬರು ಮಿಜೋರಾಂನ ಲುಂಗ್ಲೈ ಜಿಲ್ಲೆಯವರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT