ದೇಶ

ಕೋವ್ಯಾಕ್ಸಿನ್ ಲಸಿಕೆಯ ತ್ವರಿತ ಬಿಡುಗಡೆಗೆ ರಾಜಕೀಯ ಒತ್ತಡ ಆರೋಪ; ಆರೋಗ್ಯ ಸಚಿವಾಲಯ ಹೇಳೋದೇನು ಅಂದರೆ...

Srinivas Rao BV

ನವದೆಹಲಿ: ಕೋವಿಡ್-19 ಲಸಿಕೆ ಕೋವ್ಯಾಕ್ಸಿನ್ ಗೆ ಔಷಧ ನಿಯಂತ್ರಕ ಸಂಸ್ಥೆಯ ಅನುಮೋದನೆ ದೊರೆತಿದ್ದು ರಾಜಕೀಯ ಒತ್ತಡದಿಂದ ಎಂಬ ಆರೋಪಗಳಿಗೆ ಸರ್ಕಾರ ಉತ್ತರ ನೀಡಿದೆ. 

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಆರೋಪಗಳು ಸಂಪೂರ್ಣ ದಾರಿತಪ್ಪಿಸುವ' ಮತ್ತು 'ತಪ್ಪಾದ' ಆರೋಪಗಳಾಗಿವೆ ಎಂದು ಹೇಳಿದೆ.

ಕೋವಿಡ್-19 ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬಳಕೆ ಮಾಡುವುದಕ್ಕೆ ಅನುಮೋದನೆ ನೀಡುವಾಗ ವೈಜ್ಞಾನಿಕ ವಿಧಾನ ಮತ್ತು ನಿಗದಿತ ಮಾನದಂಡಗಳನ್ನು ಅನುಸರಿಸಿರುವುದಾಗಿ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಕೆಲವೊಂದು ಮಾಧ್ಯಮಗಳ ವರದಿಯ ಪ್ರಕಾರ, ದೇಶೀಯವಾಗಿ ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗೆ ಕೆಲವು ನಿರ್ದಿಷ್ಟ ಪ್ರಕ್ರಿಯೆಗಳನ್ನು ಬಿಟ್ಟು, ಕ್ಲಿನಿಕಲ್ ಟ್ರಯಲ್ ಗಳನ್ನು ತ್ವರಿತಗೊಳಿಸಬೇಕಾಯಿತು. ಇದಕ್ಕೆ ರಾಜಕೀಯ ಒತ್ತಡ ಕಾರಣವಾಗಿದೆ.

ಮೂರು ಹಂತಗಳ ಕ್ಲಿನಿಕಲ್ ಟ್ರಯಲ್ ಗಳಲ್ಲಿ ಹಲವು ಅಕ್ರಮಗಳು ನಡೆದಿವೆ ಎಂದೂ ಮಾಧ್ಯಮಗಳ ವರದಿಗಳಲ್ಲಿ ಪ್ರಕಟಿಸಲಾಗಿತ್ತು. 

ಈ ಮಾಧ್ಯಮ ವರದಿಗಳು ಸಂಪೂರ್ಣವಾಗಿ ದಾರಿತಪ್ಪಿಸುವಂಥಹದ್ದಾಗಿದ್ದು, ತಪ್ಪು ಮತ್ತು ಮಾಹಿತಿಯಿಲ್ಲದ್ದಾಗಿದೆ.  "2021 ರ ಜನವರಿಯಲ್ಲಿ ತುರ್ತು ಬಳಕೆಗೆ ಅನುಮೋದನೆ ನೀಡುವುದಕ್ಕೂ ಮುನ್ನ ಲಸಿಕೆ ಸುರಕ್ಷತೆ ಮತ್ತು ಇಮ್ಯುನೊಜೆನಿಸಿಟಿಗೆ ಸಂಬಂಧಿಸಿದ ಡೇಟಾ ವಿಷಯ ತಜ್ಞರ ಸಮಿತಿ ಪರಿಶೀಲನೆಗೊಳಪಟ್ಟಿತ್ತು,  ಲಸಿಕೆಗೆ ಅನುಮೋದನೆ ನೀಡುವಾಗ ಸರ್ಕಾರ ಹಾಗೂ ರಾಷ್ಟ್ರೀಯ ನಿಯಂತ್ರಕ (ಸಿಡಿಎಸ್ ಸಿಒ) ಕೆಲವು ವೈಜ್ಞಾನಿಕ ವಿಧಾನ ಹಾಗೂ ನಿಗದಿತ ಮಾನದಂಡಗಳನ್ನು ಅನುಸರಿಸಲಾಗಿದೆ" ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.

SCROLL FOR NEXT