ಸಾಂದರ್ಭಿಕ ಚಿತ್ರ 
ದೇಶ

ಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ವಂಶವಾಹಿ ರಾಜಕೀಯದ್ದೇ ಮೇಲುಗೈ: 20 ಕ್ಷೇತ್ರಗಳಲ್ಲಿ ರಾಜಕಾರಣಿಗಳ ಪುತ್ರರ ಅದೃಷ್ಟ ಪರೀಕ್ಷೆ!

ಮುಂದಿನ ತಿಂಗಳು ನಡೆಯುತ್ತಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಲವು ರಾಜಕೀಯ ಪಕ್ಷಗಳ ನಾಯಕರು ತಮ್ಮ ಮಕ್ಕಳನ್ನು ಕಣಕ್ಕಿಳಿಸುವ ಮೂಲಕ ವಂಶವಾಹಿ ರಾಜಕೀಯ ಮುಂದುವರಿಸಿವೆ.

ಅಹಮದಾಬಾದ್: ದೇಶದ ಎಲ್ಲಾ ಚುನಾವಣೆಗಳಲ್ಲಿ ವಂಶ ರಾಜಕಾರಣ ಸಾಮಾನ್ಯವಾಗಿದೆ, ಗುಜರಾತ್ ವಿಧಾನ ಸಭೆ ಚುನಾವಣೆ ಕೂಡ ಇದಕ್ಕೆ ಹೊರತಲ್ಲ, ಏಕೆಂದರೆ ಮುಂದಿನ ತಿಂಗಳು ನಡೆಯುತ್ತಿರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಲವು ರಾಜಕೀಯ ಪಕ್ಷಗಳ ನಾಯಕರು ತಮ್ಮ ಮಕ್ಕಳನ್ನು ಕಣಕ್ಕಿಳಿಸುವ ಮೂಲಕ ವಂಶವಾಹಿ ರಾಜಕೀಯ ಮುಂದುವರಿಸಿವೆ.

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಒಟ್ಟು 182 ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಪುತ್ರರನ್ನು ಕಣಕ್ಕಿಳಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಅಂತಹ 13 ಅಭ್ಯರ್ಥಿಗಳನ್ನು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.  ಗೆಲ್ಲುವ ಕ್ಷೇತ್ರಗಳಲ್ಲಿ ತಮ್ಮ ಪುತ್ರರನ್ನು  ಕಣಕ್ಕಿಳಿಸಿ ಕ್ಷೇತ್ರಗಳನ್ನು ಸೇಪ್ ಮಾಡಿಕೊಳ್ಳುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಬುಡಕಟ್ಟು ನಾಯಕ ಮತ್ತು ಹತ್ತು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಮೋಹನ್‌ಸಿನ್ಹ ರಥ್ವಾ ಮಾತೃಪಕ್ಷದೊಂದಿಗಿನ ದಶಕಗಳ ಸಂಬಂಧವನ್ನು ಕಡಿತಗೊಳಿಸಿ ಕಳೆದ ತಿಂಗಳು ಬಿಜೆಪಿ ಸೇರಿದರು. ಆಡಳಿತ ಪಕ್ಷವು ಛೋಟಾ ಉದೇಪುರ್ ಕ್ಷೇತ್ರದಿಂದ ಅವರ ಮಗ ರಾಜೇಂದ್ರಸಿನ್ಹ್ ರಥ್ವಾ ಅವರಿಗೆ ಟಿಕೆಟ್ ನೀಡಿತು.

ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಮೀಸಲಾದ ಕ್ಷೇತ್ರವು ರಾಜೇಂದ್ರಸಿನ್ಹಾ ಮತ್ತು ಕಾಂಗ್ರೆಸ್‌ನ ಮಾಜಿ ರೈಲ್ವೇ ಸಚಿವ ನರನ್ ರಥ್ವಾ ಅವರ ಪುತ್ರ ಸಂಗ್ರಾಮ್‌ಸಿನ್ಹ್ ರಥ್ವಾ ನಡುವೆ ನೇರ ಸ್ಪರ್ಧೆಗೆ ಸಾಕ್ಷಿಯಾಗಲಿದೆ, ಇಬ್ಬರೂ ಮೊದಲ ಮೊದಲ ಬಾರಿಗೆ ಚುನಾವಣೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಶಾಸಕ ಕರಣ್ ಸಿಂಗ್ ಪಟೇಲ್ ಪುತ್ರ, ಅಹಮದಾಬಾದ್ ಜಿಲ್ಲೆಯ ಸನಂದ್ ಕ್ಷೇತ್ರದ ಹಾಲಿ ಶಾಸಕ ಕನು ಪಟೇಲ್ ಕಣಕ್ಕಿಳಿದಿದ್ದಾರೆ. ಪಟೇಲ್ ಹಿರಿಯರು 2017 ರಲ್ಲಿ ಬಿಜೆಪಿಗೆ ಸೇರಿದರು, ಅವರ ಮಗ ಮತ್ತೆ ಸಾನಂದ್‌ನಿಂದ ಸ್ಪರ್ಧಿಸಲು ದಾರಿ ಮಾಡಿಕೊಟ್ಟರು.

ಥಸ್ರಾದಿಂದ ಬಿಜೆಪಿ ಅಭ್ಯರ್ಥಿ ಯೋಗೇಂದ್ರ ಪರ್ಮಾರ್ ಅವರು ಎರಡು ಬಾರಿ ಶಾಸಕರಾದ ರಾಮಸಿಂಹ ಪರ್ಮಾರ್ ಅವರ ಪುತ್ರರಾಗಿದ್ದಾರೆ, ಅವರು 2017 ರಲ್ಲಿ ಪಕ್ಷವನ್ನು ತೊರೆಯುವ ಮೊದಲು 2007 ಮತ್ತು 2012 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದರು.

ಅಹಮದಾಬಾದ್‌ನ ಡ್ಯಾನಿಲಿಮ್ಡಾ ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್‌ನ ಶಾಸಕರಾಗಿರುವ ಶೈಲೇಶ್ ಪರ್ಮಾರ್ ಅವರು ಮಾಜಿ ಶಾಸಕ ಮನುಭಾಯ್ ಪರ್ಮಾರ್ ಅವರ ಪುತ್ರರಾಗಿದ್ದಾರೆ.  ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರಸಿನ್ಹ ವಘೇಲಾ ಅವರ ಪುತ್ರ, 2 ಬಾರಿ ಶಾಸಕರಾಗಿದ್ದ ಮಹೇಂದ್ರಸಿನ್ಹ್ ವಘೇಲಾ ಕಳೆದ ತಿಂಗಳು ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಂಡರು. ಬಯಾದ್ ಕ್ಷೇತ್ರದಿಂದ ಪಕ್ಷದಿಂದ ಕಣಕ್ಕಿಳಿದಿದ್ದಾರೆ.

ಅವರು 2012 ಮತ್ತು 2017 ರ ನಡುವೆ ಕಾಂಗ್ರೆಸ್ ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದರು, 2019 ರಲ್ಲಿ ಬಿಜೆಪಿ ಸೇರಿದ್ದರು ಮತ್ತು ಕಳೆದ ತಿಂಗಳು ತಮ್ಮ ಮಾತೃ ಪಕ್ಷವಾದ ಕಾಂಗ್ರೆಸ್‌ಗೆ ಮರಳಿದರು. ಮಾಜಿ ಮುಖ್ಯಮಂತ್ರಿ ಅಮರಸಿಂಹ ಚೌಧರಿ ಅವರ ಪುತ್ರ ತುಷಾರ್ ಚೌಧರಿ ಅವರು ಎಸ್‌ಟಿ ಅಭ್ಯರ್ಥಿಗಳಿಗೆ ಮೀಸಲಾದ ಬಾರ್ಡೋಲಿಯಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT