ನವದೆಹಲಿ: ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಫ್ತಾಬ್ ತಾನು ತನ್ನ ಲಿವ್ ಇನ್ ಪಾರ್ಟರ್ ನ್ನು ಆಕ್ಷಣದ ಆಕ್ರೋಶದ ಆವೇಗದಲ್ಲಿ ಹತ್ಯೆ ಮಾಡಿದೆ ಎಂದು ಕೋರ್ಟ್ ಎದುರು ಹೇಳಿಕೆ ನೀಡಿದ್ದಾನೆ.
ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಆತನನ್ನು ಸಾಕೇತ್ ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು.
ಇದನ್ನೂ ಓದಿ: ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ತಲೆಬುರುಡೆ, ದವಡೆಯ ಭಾಗ ಪತ್ತೆ: ಪ್ರಯೋಗಾಲಯಕ್ಕೆ ಕಳುಹಿಸಿದ ದೆಹಲಿ ಪೊಲೀಸರು!
ಕೋರ್ಟ್ ಎದುರು ಹಾಜರುಪಡಿಸಿದ್ದಾಗ ಅಫ್ತಾಬ್, ತಾನು ತನಿಖೆಗೆ ಸಹಕರಿಸುತ್ತಿರುವುದಾಗಿ ಹೇಳಿದ್ದು, "ಆಕ್ಷಣದ ಆಕ್ರೋಶದ ಆವೇಗದಲ್ಲಿ ಹತ್ಯೆ ನಡೆದುಹೋಯಿತು" ಎಂದು ಕೋರ್ಟ್ ಗೆ ಆರೋಪಿ ಹೇಳಿಕೆ ನೀಡಿದ್ದಾನೆ. ನಡೆದ ಘಟನೆಯನ್ನು ನೆನಪಿಸಿಕೊಳ್ಳುವುದಕ್ಕೆ ತನಗೆ ಸಾಧ್ಯವಾಗುತ್ತಿಲ್ಲ ಎಂದೂ ಅಫ್ತಾಬ್ ಕೋರ್ಟ್ ವಿಚಾರಣೆ ವೇಳೆ ಹೇಳಿದ್ದಾನೆ.
ಅಫ್ತಾಬ್ ತನ್ನ ಲಿವ್-ಇನ್-ಪಾರ್ಟನರ್ ಶ್ರದ್ಧಾ ವಾಕರ್ ನ್ನು ಅಫ್ತಾಬ್ ಎಂಬಾತ ಮೇ ತಿಂಗಳಲ್ಲಿ ಹತ್ಯೆ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದ, ಇನ್ನು ದೆಹಲಿ ಪೊಲೀಸರು ಆತನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಬೇಕೆಂದು ನ್ಯಾಯಾಲಯದ ಅನುಮತಿಯನ್ನು ಕೇಳಿದ್ದಾರೆ.