ದೇಶ

ಜಾಕಿರ್ ನಾಯ್ಕ್ ಗೆ ಆಹ್ವಾನ: ಫೀಫಾ ಬಹಿಷ್ಕರಿಸಲು ಸರ್ಕಾರಕ್ಕೆ ಬಿಜೆಪಿ ನಾಯಕನ ಆಗ್ರಹ

Srinivas Rao BV

ಗೋವಾ: ವಿವಾದಿತ ಇಸ್ಲಾಮಿಕ್ ಪ್ರಚಾರಕ ಜಾಕಿರ್ ನಾಯ್ಕ್ ನ್ನು ಫೀಫಾ ವಿಶ್ವಕಪ್ ಗೆ ಕತಾರ್ ಆಹ್ವಾನಿಸಿದೆ ಎಂಬ ಊಹಾಪೋಹಗಳ ನಡುವೆಯೇ ಇದೇ ಕಾರಣವನ್ನಿಟ್ಟುಕೊಂಡು ಫೀಫಾ ವಿಶ್ವಕಪ್ ನ್ನು ಬಹಿಷ್ಕರಿಸುವಂತೆ ಬಿಜೆಪಿ ನಾಯಕರೊಬ್ಬರು ಸರ್ಕಾರವನ್ನು ಆಗ್ರಹಿಸಿದ್ದಾರೆ.
 
ಗೋವಾ ಬಿಜೆಪಿ ವಕ್ತಾರ, ಸವಿಯೋ ರೋಡ್ರಿಗಸ್ ಸರ್ಕಾರ ಹಾಗೂ ಫುಟ್ಬಾಲ್ ಸಂಘಗಳಿಗೆ ಈ ಮನವಿ ಸಲ್ಲಿಸಿದ್ದಾರೆ.

2016 ರಲ್ಲಿ ಭಾರತ ತೊರೆದಿರುವ ನಾಯ್ಕ್ ವಿವಾದಿತ ಧರ್ಮ ಪ್ರಚಾರಕನಾಗಿದ್ದು, ಈಗ ಮಲೇಷ್ಯಾದಲ್ಲಿದ್ದಾನೆ. ಆತನಿಗೆ ಅಲ್ಲಿನ ಸರ್ಕಾರ ಶಾಶ್ವತ ನಿವಾಸಿಯ ಸ್ಥಾನಮಾನ ನೀಡಿದೆ. ಭಾರತ ಹಲವು ಬಾರಿ ಆತನ ಗಡಿಪಾರಿಗೆ ಮಲೇಷ್ಯಾಗೆ ಮನವಿ ಸಲ್ಲಿಸಿದೆ. 

ಭಾರತೀಯ ಕಾನೂನಿನಡಿಯಲ್ಲಿ ಬೇಕಾಗಿರುವ ವಿವಾದಿತ ವ್ಯಕ್ತಿ ಜಾಕಿರ್ ನಾಯ್ಕ್ ಆಗಿದ್ದು, ದ್ವೇಷ ಭಾಷಣ, ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲೂ ಬೇಕಾಗಿದ್ದಾನೆ.
 
ಭಯೋತ್ಪಾದಕರ ಪರ ಮಾತನಾಡುವ ವ್ಯಕ್ತಿಯೂ ಆತನಾಗಿದ್ದು, ಆತನನ್ನೇ ಓರ್ವ ಭಯೋತ್ಪಾದಕ ಎಂದು ಹೇಳಿದರೂ ತಪ್ಪಾಗಲಾರದು ಎಂದು ಬಿಜೆಪಿ ನಾಯಕ ವಾಗ್ದಾಳಿ ನಡೆಸಿದ್ದಾನೆ.
 
ಕತಾರ್ ನಲ್ಲಿರುವ ಭಾರತೀಯರು, ಅಲ್ಲಿಗೆ ತೆರಳುತ್ತಿರುವ ಭಾರತೀಯರು, ಕೇಂದ್ರ ಸರ್ಕಾರ ಫುಟ್ಬಾಲ್ ಸಂಘಟನೆಗಳಿಗೆ ಫೀಫಾವನ್ನು ಬಹಿಷ್ಕರಿಸುವಂತೆ ಬಿಜೆಪಿ ವಕ್ತಾರ ಸವಿಯೋ ರೋಡ್ರಿಗಸ್ ಕರೆ ನೀಡಿದ್ದಾರೆ.

SCROLL FOR NEXT