ಸಾಂದರ್ಭಿಕ ಚಿತ್ರ 
ದೇಶ

ಗಡಿ ತಕರಾರು ನಡುವೆಯೂ ಚೀನಾ ಜೊತೆ ಹೆಚ್ಚುತ್ತಿದೆ ಭಾರತದ ವ್ಯಾಪಾರ ಅವಲಂಬನೆ, ಪ್ರಸಕ್ತ ವರ್ಷ ಶೇ.14.6ರಷ್ಟು ಏರಿಕೆ

ಭಾರತ-ಚೀನಾ ನಡುವೆ ರಾಜಕೀಯ ಮತ್ತು ರಾಜತಾಂತ್ರಿಕ ನಿಲುವು ಏನೇ ಇರಲಿ - ಚೀನಾದೊಂದಿಗೆ ವ್ಯಾಪಾರದ ಮೇಲಿನ ಭಾರತದ ಅವಲಂಬನೆಯು ಹೆಚ್ಚುತ್ತಲೇ ಇದೆ. 

ನವದೆಹಲಿ: ಭಾರತ-ಚೀನಾ ನಡುವೆ ರಾಜಕೀಯ ಮತ್ತು ರಾಜತಾಂತ್ರಿಕ ನಿಲುವು ಏನೇ ಇರಲಿ - ಚೀನಾದೊಂದಿಗೆ ವ್ಯಾಪಾರದ ಮೇಲಿನ ಭಾರತದ ಅವಲಂಬನೆಯು ಹೆಚ್ಚುತ್ತಲೇ ಇದೆ. ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿಂಗ್‌ಪಿಂಗ್ ಅವರೊಂದಿಗೆ ಹಸ್ತಲಾಘವ ಮಾಡಿದರೂ ಸಹ, ವ್ಯಾಪಾರ ವಹಿವಾಟಿನಲ್ಲಿ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಪ್ರಯತ್ನಿಸುತ್ತಿದೆ. 

ಭಾರತ ಮತ್ತು ಚೀನಾದ(India and China) ವ್ಯಾಪಾರವು ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 103.6 ಬಿಲಿಯನ್‌ ಡಾಲರ್ ಗೆ ತಲುಪಿದ್ದು, ಶೇಕಡಾ 14. 6ರಷ್ಟು ಹೆಚ್ಚಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜನ್ ಪುನರುಚ್ಚರಿಸಿದ್ದಾರೆ. ದಕ್ಷಿಣ ಏಷ್ಯಾದ ದೇಶಗಳೊಂದಿಗಿನ ಚೀನಾದ ವ್ಯಾಪಾರವು ದಶಕದ ಹಿಂದೆ ಇದ್ದಕ್ಕಿಂತ ದ್ವಿಗುಣಗೊಂಡಿದೆ ಎಂದು ಅವರು ಹೇಳಿದ್ದಾರೆ.

ಈ ಹೆಚ್ಚಳಕ್ಕೆ ಹೆಚ್ಚಿನ ಕೊಡುಗೆ ನೀಡಿರುವ ದೇಶ ಭಾರತ. ಭಾರತವು ದೇಶೀಯ ಉತ್ಪಾದನೆಯನ್ನು, ಮೇಕ್ ಇನ್ ಇಂಡಿಯಾದಲ್ಲಿ ಹೆಚ್ಚು ಸಾಧಿಸಿ ಪರಾವಲಂಬನೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇತರ ಮಾರುಕಟ್ಟೆಗಳಿಂದ ಖರೀದಿಸಲು ಪ್ರಯತ್ನಿಸುತ್ತಿದೆ, ಆದರೆ ಪ್ರಮಾಣದ ಮತ್ತು ವೆಚ್ಚದ ಪರಿಣಾಮಕಾರಿತ್ವದ ಆರ್ಥಿಕತೆಯು ಚೀನಾಕ್ಕೆ ಹತ್ತಿರವಾಗುವಂತೆ ಮಾಡುತ್ತಿದೆ ಎಂದು ಮೂಲಗಳು ಹೇಳುತ್ತವೆ.

ಭಾರತವು ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು (FTA) ಹೊಂದಿದೆ; ಆಸ್ಟ್ರೇಲಿಯಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮವಾಗಿದ್ದು, ಇಂಗ್ಲೆಂಡ್(UK) ನೊಂದಿಗೆ ಮಾತುಕತೆಯಲ್ಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಭಾರತ ಚೀನಾದ ಮೇಲಿನ ವ್ಯಾಪಾರ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಆದರೆ ಇತರ ಫಲಿತಾಂಶ ಕಂಡುಬರಲು ಕೆಲವು ವರ್ಷಗಳು ಬೇಕಾಗಬಹುದು. ರಾಷ್ಟ್ರಗಳಿಂದ ಆಮದು ಹೆಚ್ಚಾದಾಗ ವ್ಯಾಪಾರದ ಅಸಮತೋಲವುಂಟಾಗುತ್ತದೆ.

ಭಾರತದಿಂದ ರಫ್ತು ಕಡಿಮೆಯಾಗಿದೆ. ಕಳೆದ ವರ್ಷ ಚೀನಾದ ರಫ್ತು ಶೇಕಡಾ 30 ಕ್ಕಿಂತ ಹೆಚ್ಚಿದ್ದರೆ ಭಾರತದ ರಫ್ತು ಶೇಕಡಾ 35 ಕ್ಕಿಂತ ಕಡಿಮೆಯಾಗಿದೆ. ಭಾರತವು ಚೀನಾಕ್ಕೆ ಕಚ್ಚಾ ವಸ್ತುಗಳನ್ನು ರಫ್ತು ಮಾಡುತ್ತದೆ ಆದರೆ ಪ್ರಾಥಮಿಕವಾಗಿ ಸಿದ್ಧಪಡಿಸಿದ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ.

ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಅಪರೂಪದ ಮಣ್ಣಿನ ವಸ್ತುಗಳನ್ನು ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತದೆ. 2020 ರಲ್ಲಿ ಭಾರತ ಚೀನಾ ನಡುವೆ ಪೂರ್ವ ಲಡಾಕ್ ನಲ್ಲಿ ಗಾಲ್ವಾನ್ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮೃತಪಟ್ಟಾಗ ಪರಿಸ್ಥಿತಿ ನಿರ್ಣಾಯಕವಾಗುವುದರೊಂದಿಗೆ ಭಾರತ ಮತ್ತು ಚೀನಾ ನಡುವಿನ ರಾಜಕೀಯ ನಿಲುವಿಗೆ ಗಡಿ ವಾಸ್ತವ ರೇಖೆ(LAC)ಯಲ್ಲಿನ ಗಡಿ ಸಮಸ್ಯೆಯು ಒಂದು ದೊಡ್ಡ ಕಾರಣವಾಗಿದೆ. ಭಾರತವು ತರುವಾಯ 200 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಹೂಡಿಕೆಗಳನ್ನು ಸ್ಥಗಿತಗೊಳಿಸಿತು. ಈ ಮಧ್ಯೆ, ತನ್ನ ಆರ್ಥಿಕತೆಯು ತನ್ನ ಸ್ನೇಹಪರ ನೆರೆಹೊರೆ ದೇಶಗಳು ಮತ್ತು ಅಭಿವೃದ್ಧಿ ಪಾಲುದಾರರಿಂದ ಲಾಭ ಪಡೆದಿದೆ ಎಂದು ಚೀನಾ ಹೇಳುತ್ತದೆ.

ದಕ್ಷಿಣ ಏಷ್ಯಾದ ದೇಶಗಳೊಂದಿಗಿನ ಚೀನಾದ ವ್ಯಾಪಾರವು ದಶಕದ ಹಿಂದೆ ಹೋಲಿಸಿದರೆ ಸುಮಾರು ದ್ವಿಗುಣಗೊಂಡಿದೆ. 2021 ರಲ್ಲಿ ಒಟ್ಟು 187.5 ಶತಕೋಟಿ ಡಾಲರ್, 2019 ರಲ್ಲಿ ಪೂರ್ವ ಕೋವಿಡ್ ಸಂಖ್ಯೆಗಿಂತ 50 ಶತಕೋಟಿ ಡಾಲರ್ ನಷ್ಟು ಹೆಚ್ಚಾಗಿದೆ. ನಿರ್ದಿಷ್ಟವಾಗಿ, ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಚೀನಾ ಮತ್ತು ಭಾರತದ ನಡುವಿನ ವ್ಯಾಪಾರವು ತಲುಪಿದೆ 103.6 ಶತಕೋಟಿ ಡಾಲರ್ ಗೆ ತಲುಪಿದೆ.

ವರ್ಷದಿಂದ ವರ್ಷಕ್ಕೆ ಶೇಕಡಾ 14.6 ರಷ್ಟು ಹೆಚ್ಚಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳುತ್ತಾರೆ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್, ಪೋರ್ಟ್ ಸಿಟಿ ಕೊಲಂಬೊ ಯೋಜನೆ ಮತ್ತು ಶ್ರೀಲಂಕಾದ ಹಂಬಂಟೋಟಾ ಬಂದರು ಮತ್ತು ಇತರ ಸಂಪರ್ಕ ಸಹಕಾರ ಯೋಜನೆಗಳು ಸ್ಥಿರವಾದ ಪ್ರಗತಿಯನ್ನು ಸಾಧಿಸುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT