ಬಿ ಎಲ್ ಸಂತೋಷ್ 
ದೇಶ

ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣ: ಬಿಎಲ್ ಸಂತೋಷ್ ಗೆ ಎಸ್ಐಟಿ ನೀಡಿದ್ದ ನೋಟಿಸ್ ಗೆ ಹೈಕೋರ್ಟ್ ತಡೆ

ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ಅವರಿಗೆ ನೀಡಿದ್ದ ಎರಡನೇ ನೋಟಿಸ್ ಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ...

ಹೈದರಾಬಾದ್: ನಾಲ್ವರು ಟಿಆರ್‌ಎಸ್ ಶಾಸಕರ ಖರೀದಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ಅವರಿಗೆ ನೀಡಿದ್ದ ಎರಡನೇ ನೋಟಿಸ್ ಗೆ ತೆಲಂಗಾಣ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ತೆಲಂಗಾಣ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಎಸ್‌ಐಟಿ ಗುರುವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಸಂತೋಷ್‌ ಅವರಿಗೆ ಎರಡನೇ ನೋಟಿಸ್ ಜಾರಿ ಮಾಡಿತ್ತು. ಆದರೆ ಇದನ್ನು ಪ್ರಶ್ನಿಸಿ ಸಂತೋಷ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ ಸುರೇಂದರ್ ಅವರು ನೋಟಿಸ್‌ ಗೆ ಡಿಸೆಂಬರ್ 5 ರವರೆಗೆ ತಡೆ ನೀಡಿದ್ದಾರೆ.

ಎಸ್ಐಟಿ ಮೊದಲು ನೀಡಿದ ನೋಟಿಸ್ ನಲ್ಲಿ ಯಾವುದೇ ಅಗತ್ಯ ಅಂಶಗಳಿಲ್ಲ. ತರುವಾಯ ನವೆಂಬರ್ 23 ರಂದು ಎರಡನೇ ಬಾರಿಗೆ ನೀಡಿದ ನೋಟಿಸ್ ನಲ್ಲೂ  ಯಾವುದೇ ಸಮಂಜಸವಾದ ದೂರು ನೀಡಿದ್ದರೆ ಬಗ್ಗೆ ಅಥವಾ ನಂಬಲರ್ಹವಾದ ಮಾಹಿತಿ ಸ್ವೀಕರಿಸಿದ ಬಗ್ಗೆ ಅಥವಾ ಗುರುತಿಸಬಹುದಾದ ಅಪರಾಧವನ್ನು ಮಾಡಿದ್ದಾರೆ ಎಂಬ ಸಮಂಜಸವಾದ ಮಾಹಿತಿ ಇಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಸಂತೋಷ್ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಕಾಶ್ ರೆಡ್ಡಿ, ನೋಟಿಸ್ ನೀಡಿದಾಗ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ತನಿಖೆಗೆ ಸಹಕರಿಸಲು ಆರೋಪಿ ವಿರುದ್ಧ ಇರುವ ಸಾಕ್ಷ್ಯಗಳನ್ನು ಸೂಚಿಸಬೇಕು ಎಂದು  ವಾದಿಸಿದರು.

ಎಸ್ಐಟಿ ಸಂತೋಷ್ ಅವರಿಗೆ ನೀಡಿದ್ದ ಹೊಸ ನೋಟಿಸ್‌ನಲ್ಲಿ, ನವೆಂಬರ್ 26 ಅಥವಾ ನವೆಂಬರ್ 28 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ

ಮೊದಲು 60 ಕೋಟಿ ಠೇವಣಿಯಿಡಿ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ವಿದೇಶ ಪ್ರವಾಸಕ್ಕೆ ಬಾಂಬೆ ಹೈಕೋರ್ಟ್ ನಿಷೇಧ!

Konaseema ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ; ಮಾಲೀಕ ಸೇರಿ ಕನಿಷ್ಠ 7 ಸಾವು, ಹಲವರಿಗೆ ಗಂಭೀರ ಗಾಯ

ಪಾಕಿಸ್ತಾನದಲ್ಲಿ ರಕ್ತದೋಕುಳಿ: ಎನ್‌ಕೌಂಟರ್‌ ವೇಳೆ Pakistan ಲೆಫ್ಟಿನೆಂಟ್ ಕರ್ನಲ್, ಮೇಜರ್ ಸೇರಿದಂತೆ 11 ಪಾಕ್ ಸೈನಿಕರ ಹತ್ಯೆ

ನಿಮ್ಮ ಧೈರ್ಯ, ಬದ್ಧತೆಯನ್ನು ಮೆಚ್ಚುತ್ತೇನೆ: CJI ಮೇಲೆ ಶೂ ಎಸೆದ ವಕೀಲನಿಗೆ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ

SCROLL FOR NEXT