ಭೋಪಾಲ್: ಪ್ರಧಾನಿ ನರೇಂದ್ರ ಮೋದಿ, ಆರ್ ಎಸ್ಎಸ್ ವಿರುದ್ಧ ಹೋರಾಡುತ್ತಿದ್ದೇನೆ ಆದರೆ ಅವರ ಬಗ್ಗೆ ನನ್ನ ಅಂತರಾಳದಲ್ಲಿ ದ್ವೇಷವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಭಯ ದ್ವೇಷಕ್ಕೆ ತಿರುಗುತ್ತದೆ. ಆದರೆ ನನಗೆ ಯಾವುದೇ ಭಯವಿಲ್ಲ. ಆದ್ದರಿಂದ ನನ್ನಲ್ಲಿ ಯಾರೆಡೆಗೂ ದ್ವೇಷವಿಲ್ಲ ಎಂದು ಇಂದೋರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.
ನಾನು ಉದಾಹರಣೆ ನೀಡುತ್ತೇನೆ, ನನ್ನ ಅಜ್ಜಿ (ಇಂದಿರಾ ಗಾಂಧಿ) ಅವರಿಗೆ 32 ಗುಂಡುಗಳು ಹೊಕ್ಕಿದ್ದವು, ನನ್ನ ತಂದೆಯನ್ನು ಬಾಂಬ್ ಸ್ಫೋಟದಲ್ಲಿ ಹತ್ಯೆ ಮಾಡಲಾಯಿತು, ನನ್ನ ವಿರುದ್ಧವೂ ಹಿಂಸಾಚಾರ ನಡೆದಿದೆ. ನನಗೆ ಭಯ ಹೋಗಿದೆ. ನನ್ನ ಅಂತರಾಳದಲ್ಲೀಗ ಕೇವಲ ಪ್ರೀತಿಯಷ್ಟೇ ದ್ವೇಷವಿಲ್ಲ. ಭಯಪಡುವವರು ಎಂದಿಗೂ ಪ್ರೀತಿಸಲು ಸಾಧ್ಯವಿಲ್ಲ. ನಮ್ಮ ದೇಶದ ಡಿಎನ್ಎಯಲ್ಲಿ ದ್ವೇಷ, ಭಯವಿಲ್ಲ. ಅಲ್ಲಿರುವುದು ಪ್ರೀತಿ ಮತ್ತು ಸಹಾನುಭೂತಿಯಷ್ಟೇ. ನಾನು ಪ್ರಧಾನಿ ಮೋದಿ, ಬಿಜೆಪಿ, ಆರ್ ಎಸ್ಎಸ್ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭಯ ಬಿಡುವಂತೆ ಸಲಹೆ ನೀಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.