ದೇಶ

ವಡೋದರಾ ಬಳಿ ಕಾರ್ಖಾನೆ ಮೇಲೆ ಗುಜರಾತ್ ಎಟಿಎಸ್ ದಾಳಿ; 500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

Ramyashree GN

ಅಹಮದಾಬಾದ್: ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ವಡೋದರಾ ನಗರದ ಹೊರವಲಯದಲ್ಲಿರುವ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿದ್ದು, ಸುಮಾರು 500 ಕೋಟಿ ರೂಪಾಯಿ ಮೌಲ್ಯದ ನಿಷೇಧಿತ ಎಂಡಿ ಡ್ರಗ್‌ನ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿದೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ವಡೋದರಾ ಬಳಿಯ ಸಣ್ಣ ಕಾರ್ಖಾನೆ ಕಮ್ ಗೋಡೌನ್ ಮೇಲೆ ದಾಳಿ ನಡೆಸಿದ ವೇಳೆ, ಎಟಿಎಸ್ ಸ್ಥಳದಲ್ಲಿದ್ದ ಐವರನ್ನು ಬಂಧಿಸಿದೆ ಎಂದು ಅವರು ಹೇಳಿದರು.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಕಾನೂನುಬದ್ಧವಾಗಿ ರಾಸಾಯನಿಕಗಳನ್ನು ತಯಾರಿಸುವ ನೆಪದಲ್ಲಿ ಎಂಡಿ ಡ್ರಗ್, ಮಾದಕ ವಸ್ತುವನ್ನು ತಯಾರಿಸುತ್ತಿದ್ದರು. ಯಾರೆಲ್ಲ ಇವರ ಸಂಪರ್ಕದಲ್ಲಿದ್ದಾರೆ ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷದ ಆಗಸ್ಟ್‌ನಲ್ಲಿ ಎಟಿಎಸ್ ವಡೋದರಾ ನಗರದ ಸಮೀಪವಿರುವ ಗೋದಾಮಿನಿಂದ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ 200 ಕಿಲೋಗ್ರಾಂಗೂ ಹೆಚ್ಚು ಪಾರ್ಟಿ ಡ್ರಗ್ ಮೆಫೆಡ್ರೋನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

SCROLL FOR NEXT