ದೇಶ

ಆಗಸ್ಟ್ ನಲ್ಲಿ ಸುಮಾರು 23.28 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ ವಾಟ್ಸಾಪ್ 

Nagaraja AB

ನವದೆಹಲಿ: ವಾಟ್ಸಾಪ್ ಆಗಸ್ಟ್‌ ತಿಂಗಳಲ್ಲಿ 23.28 ಲಕ್ಷ ಭಾರತೀಯ ಖಾತೆಗಳನ್ನು ನಿಷೇಧಿಸಿದೆ. ಅದರಲ್ಲಿ 10 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಪಡೆಯುವ ಮೊದಲೇ ಪೂರ್ವಭಾವಿಯಾಗಿ ತೆಗೆದುಹಾಕಲಾಗಿದೆ ಎಂದು ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಶನಿವಾರ ತಿಳಿಸಿದೆ.

ಇದು ಹಿಂದಿನ ತಿಂಗಳಿನಲ್ಲಿ ಮಾಡಲಾದ ನಿಷೇಧಕ್ಕಿಂತ  ಕಡಿಮೆಯಾಗಿದೆ. ಜುಲೈನಲ್ಲಿ 23.87 ಲಕ್ಷ ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿತ್ತು.  2022 ಆಗಸ್ಟ್ 1 ರಿಂದ ಆಗಸ್ಟ್ 31ರ ನಡುವೆ 23, 28000 ವಾಟ್ಸಾಪ್ ಖಾತೆಗಳನ್ನು  ನಿಷೇಧಿಸಲಾಗಿದೆ. ಈ ಪೈಕಿ 10,08,000 ಖಾತೆಗಳನ್ನು ಬಳಕೆದಾರರಿಂದ ಯಾವುದೇ ವರದಿ ಪಡೆಯುವ ಮುನ್ನವೇ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ತನ್ನ ತಿಂಗಳು ಅನುಸರಣೆ ವರದಿಯಲ್ಲಿ ತಿಳಿಸಿದೆ.

91 ಫೋನ್ ನಂಬರ್ ನೊಂದಿಗೆ ಭಾರತೀಯ ಖಾತೆದಾರರನ್ನು ಗುರುತಿಸಲಾಗುತ್ತದೆ. ಕಳೆದ ವರ್ಷ ಜಾರಿಗೆ ಬಂದ ಕಠಿಣ ಐಟಿ ನಿಯಮಗಳ ಪ್ರಕಾರ, ದೊಡ್ಡ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು (50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ) ಪ್ರತಿ ತಿಂಗಳು ಸ್ವೀಕರಿಸಿದ ದೂರುಗಳ ವಿವರಗಳು ಮತ್ತು ತೆಗೆದುಕೊಂಡ ಕ್ರಮಗಳ ಅನುಸರಣೆ ವರದಿಗಳನ್ನು ಪ್ರಕಟಿಸಲು ಕಡ್ಡಾಯಗೊಳಿಸಲಾಗಿದೆ. 

SCROLL FOR NEXT