ದೇಶ

ಮೃತ ವ್ಯಕ್ತಿಯ 19.70 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ: ಕ್ರೈಸ್ತ ಪಾದ್ರಿ, ಬಾರ್ ನ ಮಹಿಳಾ ಉದ್ಯೋಗಿ ಸೇರಿ ಮೂವರ ಬಂಧನ

Srinivas Rao BV

ಥಾಣೆ: ಮೃತ ವ್ಯಕ್ತಿ ವ್ಯಕ್ತಿಯೋರ್ವನ 19.70 ಕೋಟಿ ರೂಪಾಯಿ ಆಸ್ತಿ ಕಬಳಿಸಿದ್ದ ಪ್ರಕರಣದಲ್ಲಿ ಮಹಾರಾಷ್ಟ್ರ ಪೊಲೀಸರು ಥಾಣೆಯಲ್ಲಿ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಬಂಧನಕ್ಕೊಳಗಾಗಿರುವವರ ಪೈಕಿ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೂ ಇದ್ದು, ಮೃತ ವ್ಯಕ್ತಿಯೋರ್ವನ ಆಸ್ತಿ ಕಬಳಿಸುವುದಕ್ಕಾಗಿ ಆತನೊಂದಿಗೆ ವಿವಾಹವಾಗಿದ್ದನ್ನು ನಂಬಿಸಲು ನಕಲಿ ವಿವಾಹ ಪ್ರಮಾಣಪತ್ರವನ್ನು ಆರೋಪಿಗಳು ತಯಾರಿಸಿದ್ದರು. 

ಅಂಜಲಿ ಅಗರ್ವಾಲ್ (30) ಥಾಮಸ್ ರಾಮುಲ್ ಗೋಡ್ಪವಾರ್ (50) ಮಹೇಶ್ ಕಟ್ಕರ್ (37)  ಬಂಧಿತ ಆರೋಪಿಗಳಗಿದ್ದಾರೆ. 

ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ಅಗರ್ವಾಲ್ ಆ ಬಾರ್ ಗೆ ಆಗಾಗ್ಗೆ ಬರುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬರೊಂದಿಗೆ ಗೆ ಪ್ರೇಮಾಂಕುರವಾಗಿತ್ತು. ಆ ಗ್ರಾಹಕ 2021 ರ ನವೆಂಬರ್ ನಲ್ಲಿ ಮೃತಪಟ್ಟಿದ್ದ. ಆದರೆ ಅಂಜಲಿ ಅಗರ್ವಾಲ್ ಇಬ್ಬರು ವ್ಯಕ್ತಿಗಳ ಸಹಾಯ ಪಡೆದು ಗ್ರಾಹಕನೊಂದಿಗೆ ತನ್ನ ಮದುವೆ ಆಗಿದೆ ಎಂದು ನಂಬಿಸುವ ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಆತನ 19.70 ಕೋಟಿ ರೂಪಾಯಿ ಆಸ್ತಿ ಯನ್ನು ಕಬಳಿಸಿದ್ದರು ಎಂದು ಪೊಲೀಸ್ ಅಧಿಕಾರಿ ಮಲೋಜಿ ಶಿಂಧೆ ಹೇಳಿದ್ದಾರೆ. 

ಈ ಅಕ್ರಮ ಬೆಳಕಿಗೆ ಬಂದ ಬೆನ್ನಲ್ಲೇ ಮೃತ ವ್ಯಕ್ತಿಯ ತಾಯಿ ದೂರು ನೀಡಿದ್ದು, ಮೂವರ ವಿರುದ್ಧವೂ ಪ್ರಕರಣ ದಾಖಲಾಗಿದೆ. 

SCROLL FOR NEXT