ದೇಶ

ರಾಷ್ಟ್ರ ರಾಜಕಾರಣಕ್ಕೆ ಮತ್ತೊಂದು ಪಕ್ಷ ಸೇರ್ಪಡೆ: ರಾಷ್ಟ್ರೀಯ ಪಕ್ಷದ ಹೆಸರು ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್!

Shilpa D

ತೆಲಂಗಾಣ:  2024 ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ತೆಲಂಗಾಣ  ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್  ​​​ಹೊಸ ಪಕ್ಷ ಲಾಂಚ್ ಮಾಡಿದ್ದಾರೆ. ತಮ್ಮ ಪಕ್ಷಕ್ಕೆ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್​) ಎಂದು ಹೆಸರಿಟ್ಟಿದ್ದಾರೆ.

ತಮ್ಮ ಟಿಆರ್​ಎಸ್​ ಪಕ್ಷವನ್ನೇ ಬಿಆರ್​ಎಸ್​ ಎಂದು ಮರುನಾಮಕರಣ ಮಾಡಿದ್ದಾರೆ. ತೆಲಂಗಾಣ ಭವನದಲ್ಲಿ ಕೆಸಿಆರ್ ತಮ್ಮ ಹೊಸ ಪಕ್ಷ ಬಿಆರ್‌ಎಸ್ ಘೋಷಣೆ ಮಾಡಿದ್ದಾರೆ. ಇದಕ್ಕೂ ಮುನ್ನ ನಡೆದ ಸಭೆಯಲ್ಲಿ 280ಕ್ಕೂ ಹೆಚ್ಚು ಟಿಆರ್​ಎಸ್​ ಪಕ್ಷದ ಕಾರ್ಯಕಾರಿ ಸದಸ್ಯರು, ಶಾಸಕರು ಮತ್ತು ಸಂಸದರು ಟಿಆರ್‌ಎಸ್ ಅನ್ನು ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್)ನೊಂದಿಗೆ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿದ್ದಾರೆ. ಈ ವೇಳೆ ಜೆಡಿಎಸ್​ ನಾಯಕ ಹೆಚ್​ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಜಯದಶಮಿಯ ದಿನವಾದ ಇಂದು ಶುಭ ಮುಹೂರ್ತದಲ್ಲಿ ತಮ್ಮ ಹೊಸ ಪಕ್ಷಕ್ಕೆ ಚಾಲನೆ ಮಾಡಿದ್ದಾರೆ. 2024 ರಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಎದುರಿಸಲು ಉದ್ದೇಶಿಸಿರುವುದಾಗಿ ಕೆಸಿಆರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಮಿಷನ್‌ನಲ್ಲಿ ತನ್ನೊಂದಿಗೆ ಸೇರಲು ಹಲವಾರು ವಿರೋಧ ಪಕ್ಷಗಳನ್ನು ಆಹ್ವಾನಿಸಿದ್ದಾರೆ.

SCROLL FOR NEXT