ದೇಶ

ಸೋನಾಲಿ ಫೋಗಟ್ ಸಾವಿನ ಪ್ರಕರಣ: ಕುಟುಂಬ ಸದಸ್ಯರಿಗೆ 2 ಅನಾಮಧೇಯ ಪತ್ರ ರವಾನೆ

Ramyashree GN

ಹಿಸಾರ್ (ಹರಿಯಾಣ): ಮೃತ ನಟಿ ಮತ್ತು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಕುಟುಂಬ ಸದಸ್ಯರಿಗೆ ಎರಡು ಅನಾಮಧೇಯ ಪತ್ರಗಳು ಲಭ್ಯವಾಗಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಹೊಂದಿರುವುದರಿಂದ ಈ ಎರಡೂ ಪತ್ರಗಳನ್ನು ತನಿಖೆ ಮಾಡಬೇಕು ಎಂದು ಸೋನಾಲಿ ಅವರ ಸೋದರ ಮಾವ ಅಮನ್ ಪೂನಿಯಾ ಹೇಳಿದ್ದಾರೆ.

ಅನಾಮಧೇಯ ಪತ್ರಗಳ ಪೈಕಿ ಮೊದಲ ಪತ್ರದಲ್ಲಿ ಕೊಲೆ ಪ್ರಕರಣದಲ್ಲಿ 10 ಕೋಟಿ ರೂ.ಗಳ ಡೀಲ್ ನಡೆದಿದೆ ಎಂದು ಹೇಳಲಾಗಿದೆ. ಇನ್ನೊಂದು ಪತ್ರದಲ್ಲಿ ರಾಜಕೀಯ ನಾಯಕರ ಹೆಸರನ್ನು ನಮೂದಿಸಲಾಗಿದೆ.

ಒಂದು ತಿಂಗಳ ಹಿಂದೆ ಒಂದು ಪತ್ರ ಬಂದಿದ್ದರೆ, ಇನ್ನೊಂದು ಪತ್ರ ಕೆಲವು ದಿನಗಳ ನಂತರ ಬಂದಿತ್ತು ಎಂದು ಅಮನ್ ಹೇಳಿದ್ದಾರೆ.

ಸೋನಾಲಿ ಅವರ ಸಹೋದರಿ ರುಕೇಶ್ ಆದಂಪುರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ನಮಗೆ ಆಮ್ ಆದ್ಮಿ ಪಕ್ಷದೊಂದಿಗೆ ಯಾವುದೇ ಸಂಬಂಧವಿಲ್ಲ. ನಾವು ಈಗಾಗಲೇ ಭಾರತೀಯ ಜನತಾ ಪಕ್ಷದಲ್ಲಿದ್ದೇವೆ. ನಾವು ಜನರೊಂದಿಗೆ ಚರ್ಚಿಸಿ ನಂತರ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಮನ್ ಹೇಳಿದ್ದಾರೆ.
ಈ ಹಿಂದೆ ಸೋನಾಲಿ ಫೋಗಟ್ ಸಹೋದರ ಬಿಜೆಪಿ ನಾಯಕ ಕುಲದೀಪ್ ಬಿಷ್ಣೋಯ್ ತನ್ನ ಸಹೋದರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಹಿಸಾರ್‌ನಲ್ಲಿ ನಡೆದ ಸರ್ವ್ ಖಾಪ್ ಮಹಾಪಂಚಾಯತ್‌ನಲ್ಲಿ ರಿಂಕು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಖಾಪ್ ವಕ್ತಾರ ಸಂದೀಪ್ ಭಾರ್ತಿ, ಸೋನಾಲಿ ಅವರ ಕುಟುಂಬ ಸದಸ್ಯರ ಆರೋಪದ ನಂತರ, ಮಹಾಪಂಚಾಯತ್ ಮುಂದೆ ಕುಲದೀಪ್ ಬಿಷ್ಣೋಯ್ ಅವರು ತಮ್ಮ ನಿಲುವನ್ನು ವಿವರಿಸಬೇಕು ಎಂದು  ಸರ್ವ್ ಖಾಪ್ ಮಹಾಪಂಚಾಯತ್ ನಿರ್ಧರಿಸಿದೆ ಎಂದು ಹೇಳಿದರು.

SCROLL FOR NEXT