ದೇಶ

ಅರ್ಜಿಯಲ್ಲಿ ಆಕ್ಷೇಪಾರ್ಹ ಫೋಟೋಗಳು: ಅಡ್ವೊಕೇಟ್ ಗೆ ಬಾಂಬೆ ಹೈಕೋರ್ಟ್ ನಿಂದ 25,000 ರೂಪಾಯಿ ದಂಡ

Srinivas Rao BV

ಮುಂಬೈ: ತನ್ನ ಕಕ್ಷಿದಾರರ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದ ಅರ್ಜಿಯಲ್ಲಿ ಆಕ್ಷೇಪಾರ್ಗ ಫೋಟೊ ಬಳಸಿದ್ದ ಅಡ್ವೊಕೇಟ್ ಗೆ ಬಾಂಬೆ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿದೆ. 

ನ್ಯಾ. ರೇವತಿ ಮೋಹಿತೆ ದೇರೆ ಹಾಗೂ ಎಸ್ಎಂ ಮೋದಕ್ ತಮ್ಮ ಆದೇಶದಲ್ಲಿ, ಅರ್ಜಿಯಲ್ಲಿ ವಕೀಲರು ವಿವೇಚನಾರಹಿತವಾಗಿ ಅತ್ಯಂತ ಆಕ್ಷೇಪಾರ್ಹ ಫೋಟೊ ಬಳಸಿದ್ದಾರೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಅ.07 ರ ಆದೇಶವನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ. 

ಈ ಅರ್ಜಿಗಳು ರಿಜಿಸ್ಟ್ರಿ ಮುಂದೆ ಹೋಗಲಿದ್ದು, ವಿವಿಧ ಇಲಾಖೆಗಳಿಗೆ ಕಳಿಸಲ್ಪಡುತ್ತವೆ. ಛಾಯಾಚಿತ್ರಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳನ್ನು ಬಹಿರಂಗಪಡಿಸುತ್ತದೆ ಎಂದು ಕೋರ್ಟ್ ಹೇಳಿದೆ. ಈ ರೀತಿ ಫೋಟೋಗಳನ್ನು ಅರ್ಜಿಯಲ್ಲಿ ಲಗತ್ತಿಸುವುದು ಆ ವ್ಯಕ್ತಿಗಳ ಗೌಪ್ಯತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಹೇಳಿದ್ದು ಅರ್ಜಿಯಿಂದ ಫೋಟೋಗಳನ್ನು ತೆಗೆಯುವಂತೆ ಕೋರ್ಟ್ ಆದೇಶಿಸಿದೆ.

SCROLL FOR NEXT